ಚಂದ್ರಗಿರಿಯ ತೀರ ಖ್ಯಾತಿಯ ಕನ್ನಡದ ಪ್ರಮುಖ ಲೇಖಕಿ ಸಾರಾ ಅಬೂಬಕರ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಜನವರಿ 8ರಂದು ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜೂನ್ 30, 1936ರಂದು ಜನಿಸಿದರು. ತಂದೆ ನ್ಯಾಯವಾದಿ ಪಿ.ಅಹಮದ್ ಮತ್ತು ರಾಯಿ ಜೈನಾಬಿ ಮಗಳಾಗಿ ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟಿದೂರಿನಲ್ಲೇ ಮಾಡಿದರು. ಹೈಸ್ಕೂಲ್ ಕಾಸರಗೋಡಿನಲ್ಲಿ ನಡೆಯಿತು. ಇಂಜಿನಿಯರ್ ಆಗಿದ್ದ ಅಬೂಬಕರ್ ಅವರೊಂದಿಗೆ ವಿವಾಹ ಮಾಡಿದರು.
ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳನ್ನು ಓದಿದ ನಂತರ ತಾನೂ ಬರೆಯಬೇಕೆಂದು ಆಶಯದಿಂದ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಬರೆದರು. ಅದು ಪ್ರಸಿದ್ದವಾಯಿತು. ಲಂಕೇಶ್ ಪತ್ರಿಕೆಯಲ್ಲಿ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಯಿತು.
ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಲೇಖನಗಳನ್ನು ಬರೆಯಲು ಸಂಪಾದಕ ಲಂಕೇಶ್ ಅವಕಾಶ ಕೊಟ್ಟರು. ಲಂಕೇಶ್ ಪತ್ರಿಕೆಯ ಮೂಲಕ ಹೆಚ್ಚು ಪ್ರಸಿದ್ದಿಗೆ ಬಂದರು.
ಅವರು ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ, ತಳ ಒಡೆದ ದೋಣಿ, ಪಂಜರ ಮೊದಲಾದ ಕಾದಂಬರಿಗಳನ್ನು ಬರೆದರು. ಅವರ ಪ್ರಸಿದ್ದ ಕಥಾ ಸಂಕಲನಗಳೆಂದರೆ ಚಪ್ಪಲಿಗಳು, ಪಯಣ ಮತ್ತು ಇತರೆ ಕಥೆಗಳು, ಆರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಕೃತಿಗಳನ್ನು ಬರೆದು ಹೆ
ಸಾರಾ ಅಬೂಬಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ಸರೋಜಾದೇವಿ ಪ್ರಶ್ತಿ, ಅನುಪಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಸಂದಿವೆ.