ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದ್ದು 37 ವರ್ಷ ಆದ್ರೂ ಮದುವೆ ಆಗಿಲ್ಲ, ನಿನಗೆ ಯಾರೂ ಹುಡುಗಿ ಕೊಡಲ್ಲಾ ಎಂದು ಕಿಚಾಯಿಸಿದವನನ್ನೇ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಕೊಲೆಯಾದ ವ್ಯಕ್ತಿ. ಈತ ಕುಮಾರ ನಾಯಕ ಸ್ನೇಹಿತ ಕುಮಾರ ನಾಯಕ ಎಂದು ಪೊಲೀಸರು ತಿಳಿಸಿದ್ದಾರೆ.
ಸಣ್ಣಸ್ವಾಮಿ ನಾಯಕ ಹಾಗೂ ಕುಮಾರ ನಾಯಕ ಸ್ನೇಹಿತರು. ಹರವೆ ಗ್ರಾಮದಲ್ಲಿ ಇವರು ಮದ್ಯಪಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಣ್ಣಸ್ವಾಮಿ ನಾಯಕ, ಕುಮಾರ ನಾಯಕನನ್ನು ಕಿಚಾಯಿಸಲು ಆರಂಭಿಸಿದ ಎಂದು ತಿಳಿದುಬಂದಿದೆ.
ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ. ನಿನಗೆ ಯಾರೂ ಹುಡುಗಿ ಕೊಡಲ್ಲ ಎಂದು ಸಣ್ಣಸ್ವಾಮಿ ನಾಯಕ ಕಿಚಾಯಿಸಿದ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಇಬ್ಬರು ಸ್ನೇಹಿತರು ಸಾಕಷ್ಟು ಕುಡಿದಿದ್ದರು ಎಂದು ತಿಳಿದುಬಂದಿದ್ದು ಮಾತಿಗೆ ಮಾತು ಬೆಳೆದು ಕುಮಾರ ನಾಯಕ ಚಾಕು ಕೈಗೆತ್ತಿಕೊಂಡು ಸಣ್ಣಸ್ವಾಮಿ ನಾಯಕನಿಗೆ ಇರಿದ ಪರಿಣಾಮ ಸಣ್ಣಸ್ವಾಮಿ ಮೃತಪಟ್ಟಿದ್ದಾನೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.