ಆರ್.ಎಸ್.ಎಸ್ ಪ್ರತಿಪಾದಕ ವಿ.ಡಿ.ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ಬಾಪು, ಮಹಾತ್ಮ ಗಾಂಧಿ ಅವರ ಹತ್ಯೆಗೆ ಸಮರ್ಥ ಬಂದೂಕು ಪಡೆಯಲು ನಾಥೂರಾಮ್ ಗೋಡ್ಸೆಗೆ ಸಹಾಯ ಮಾಡಿದ್ದರು ಎಂದು ಮಹಾತ್ಮ ಗಾಂಧಿ ಮೊಮ್ಮಗ ತುಷಾರ್ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಆರ್.ಎಸ್.ಎಸ್. ಸಿದ್ದಾಂತವು ಭಾರತದ ಸ್ವಾತಂತ್ರ್ಯ ವಿರುದ್ಧವಾಗಿದೆ. ಸಾವರ್ಕರ್ ಬ್ರಿಟೀಷರಿಂದ ಪಿಂಚಣಿ ಪಡೆದರು ಮತ್ತು ಅವರಿಗೆ ಸಹಾಯ ಮಾಡಿದರು ಎಂದು ತುಷಾರ್ ಗಾಂಧಿ ಟೀಕಿಸಿದರು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಹಾತ್ಮ ಗಾಂಧಿ ಮೊಮ್ಮಗ ತುಷಾರ್ ಸಾಮಾಜಿಕ ಜಾಲತಾಣದಲ್ಲಿ ಸಾವರ್ಕರ್ ವಿರುದ್ದ ಟ್ವೀಟ್ ಮಾಡಿದ್ದು, ಸಾವರ್ಕರ್ ಅವರು ಬ್ರಿಟೀಷರಿಗೆ ಸಹಾಯ ಮಾಡಿದ್ದು ಮಾತ್ರವಲ್ಲದೆ ನಾಥೂರಾಮ್ ಗೋಡ್ಸೆಗೆ ಬಾಪುವನ್ನು ಹತ್ಯೆ ಮಾಡಲು ಸಮರ್ಥ ಬಂದೂಕನ್ನು ಹುಡುಕಲು ಸಹಾಯ ಮಾಡಿದರು ಎಂದು ಆರೋಪಿಸಿದರು.
ತುಷಾರ್ ಗಾಂಧಿ ಅವರು, 1930 ರ ದಶಕದಲ್ಲಿ ಬಾಪು ಅವರ ಮೇಲೆ ಹಲವಾರು ಪ್ರಯತ್ನಗಳು ನಡೆದವು. ವಿದರ್ಭದ ಅಕೋಲಾದಲ್ಲಿ ಬಾಪುವನ್ನು ಕೊಲ್ಲುವ ಸಂಚಿನ ಬಗ್ಗೆ ಪ್ರಬೋಧಂಕರ್ ಠಾಕ್ರೆ ಅವರು ಬಾಪು ಅವರ ಸಹಚರರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಿದರು ಮತ್ತು ಬಾಪುವಿನ ಜೀವವನ್ನು ಉಳಿಸಿದರು ಎಂದು ಹೇಳಿದ್ದಾರೆ.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಸಾವರ್ಕರ್ ಅವರು ಬ್ರಿಟಿಷರಿಗೆ ಸಕ್ರಿಯವಾಗಿ ಸಹಾಯ ಮಾಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅವರ ಐಎನ್‌ಎ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾರೆ. ಇದು ನಿರಾಕರಿಸಲಾಗದ ಐತಿಹಾಸಿಕ ಸತ್ಯವಾಗಿದೆ ಎಂದು ತುಷಾರ್ ಗಾಂಧಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸೇರಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.