ಜನವರಿ 18 ರಿಂದ ಕಣ್ಣಿನ ಆರೋಗ್ಯಕ್ಕಾಗಿ ಕಂಟಿ ಬೆಳಕು ಯೋಜನೆಯನ್ನು ಮರುಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದು, ಇದರ ಜೊತೆಗೆ ಇನ್ನೂ ಕೆಲವು ಯೋಜನೆಗಳನ್ನು ಆರಂಭಿಸಲು ಸಿದ್ದತೆ ನಡೆಸಿದ್ದಾರೆ.
ರಾವ್ ಅವರು ಯೋಜನೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಟಿಆರ್.ಎಸ್ ಮೂಲಗಳು ತಿಳಿಸಿವೆ. ಇದರ ಅಡಿಯಲ್ಲಿ ಸರ್ಕಾರ ಬಡ ವರ್ಗದ ಜಮೀನುದಾರರಿಗೆ ತಮ್ಮ ಸ್ವಂತ ಪ್ಲಾಟ್ ಗಳಲ್ಲಿ ಮನೆಗಳನ್ನು ನಿರ್ಮಿಸಲು ಸರಿಸುಮಾರು 3 ಲಕ್ಷ ರೂಗಳನ್ನು ಸಹಾಯ ನೀಡಲಿದೆ.
ಈ ಯೋಜನೆಗೆ ಪರಿಶಿಷ್ಟ ಜಾತಿಗೆ ಶೇ.15 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ವಿಸ್ತರಿಸಲು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ. ಎಸ್.ಸಿಗಳಿಗೆ ದಲಿತ ಬಂಧುಗಳಂತೆ ಎಸ್.ಟಿ.ಗಳಿಗೆ 10 ಲಕ್ಷ ರೂಪಾಯಿ ಅರ್ಥಿಕ ಸಹಾಯವನ್ನು ವಿಸ್ತರಿಸುವ ಗಿರಿಜನ್ ಬಂಧು ಯೋಜನೆಯನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.
ಸಿಎಂ ಅವರು ಭರವಸೆಗಳನ್ನು ಈಡೇರಿಸಲು ಪರಾಮರ್ಶೆ ಸಭೆ, ಜಿಲ್ಲೆಗಳಿಗೆ ಪ್ರವಾಸ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಮೂಲಕ ಆಡಳಿತವನ್ನು ತ್ವರಿತಗತಿಯಲ್ಲಿ ನಡೆಸಲಿದ್ದಾರೆ.
ಗಿರಿಜನ ಬಂಧುಗಳಿಗೆ ಸಂಬಂಧಿಸಿದಂತೆ ರಾವ್ ಅವರು ಯೋಜನೆಯನ್ನು ಮೊದಲು ಎಸ್ಟಿಗಳಿಗೆ ಮೀಸಲಿಟ್ಟ 12 ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಲು ಯೋಜಿಸುತ್ತಿದ್ದಾರೆ ಮತ್ತು ಇಡಿ ರಾಜ್ಯವನ್ನು ಆವರಿಸುವಂತೆ ಹಂತಹಂತವಾಗಿ ವಿಸ್ತರಿಸಲು ಯೋಜಿಸುತ್ತಿದ್ದಾರೆ ಎಂದು ವರದಿ ಯಾಗಿದೆ.
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಮೀಸಲು. ಅವರಲ್ಲಿ ಎಸ್.ಸಿಗಳು 19 ಮತ್ತು ಎಸ್ಟಿಗಳು 12ರಷ್ಟು ಇದ್ದು, ದಲಿತ ಬಂಧು ಮತ್ತು ಗಿರಿಜನ ಬಂಧು ಯೋಜನೆಯ ಹಿನ್ನೆಲೆಯಲ್ಲಿ ಈ 31 ಮೀಸಲು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಟಿಆರ್.ಎಸ್ ನಾಯಕತ್ವ ಉದ್ದೇಶಿಸಿದೆ.