ಭಾರತದ ಸುಪ್ರೀಂಕೋರ್ಟ್ ನ 50ನೇ ಮುಖ್ಯನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ನವೆಂಬರ್ 9 ರಂದು ಅಧಿಕಾರ ಸ್ವೀಕರಿಸಿದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
74 ದಿನಗಳ ಕಾಲ ಸೇವೆ ಸಲ್ಲಿಸಿದ ಯು.ಯು.ಲಲಿತ್ ಅವರು ಚಂದ್ರಚೂಡ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಅಕ್ಟೋಬರ್ 11ರಂದು ಶಿಫಾರಸು ಮಾಡಿದ್ದರು.
ಚಂದ್ರಚೂಡ್ ಅವರ ಅಧಿಕಾರ ಅವಧಿಯು ಎರಡು ವರ್ಷಗಳ ಕಾಲ ಇರಲಿದ್ದು ನವೆಂಬರ್ 10, 2024ರವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ.