ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ದೇಶದ ಜನರ ಸೇವೆಯೇ ನನ್ನ ಆದ್ಯತೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಸುಪ್ರೀಂಕೋರ್ಟ್ ಆವರಣಕ್ಕೆ ಆಗಮಿಸಿ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುವುದು ನನ್ನ ಆದ್ಯತೆಯಾಗಿದೆ. ದಯವಿಟ್ಟು ಎದುರು ನೋಡಿ, ನಾನು ದೇಶದ ಎಲ್ಲಾ ನಾಗರಿಕರಿಗಾಗಿ ಕೆಲಸ ಮಾಡುತ್ತೇನೆ. ಅದು ತಂತ್ರಜ್ಞಾನದಲ್ಲಿರಲಿ ಅಥವಾ ನೋಂದಾವಣೆಯಲ್ಲಿರಲಿ ಅಥವಾ ನ್ಯಾಯಾಂಗ ಸುಧಾರಣೆಗಳಲ್ಲಿರಲಿ, ನಾನು ನಾಗರಿಕರ ಬಗ್ಗೆ ಕಾಳಜಿ ವಹಿಸುತ್ತೇನೆ. ಪ್ರತಿಯೊಂದು ಅಂಶವೂ ನನಗೆ ಮುಖ್ಯ ಎಂದಿದ್ದಾರೆ.
ಸಿಜೆಐ ಚಂದ್ರಚೂಡ್ ಅವರು ಭಾರತೀಯ ನ್ಯಾಯಾಂಗದ ಮುಖ್ಯಸ್ಥರಾಗಿರುವುದು ಉತ್ತಮ ಅವಕಾಶ ಮತ್ತು ಜವಾಬ್ದಾರಿ ಎಂದು ಹೇಳಿದರು.
ನ್ಯಾಯಾಂಗದಲ್ಲಿ ಜನರ ನಂಬಿಕೆಯನ್ನು ಹೇಗೆ ಖಾತ್ರಿಪಡಿಸುತ್ತಾರೆ ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮಾತಿನ ಮೂಲಕ ಮಾತ್ರವಲ್ಲ, ನನ್ನ ಕೆಲಸದ ಮೂಲಕವೂ ನಾಗರಿಕರ ವಿಶ್ವಾಸವನ್ನು ಖಾತ್ರಿಪಡಿಸುತ್ತೇನೆ ಎಂದು ತಿಳಿಸಿದರು.