ವಿಶ್ರಾಂತ ಪ್ರಾಧ್ಯಾಪಕ ಹಿರಿಯ ನಟ, ನಾಟಕಕಾರ ಟಿ.ಎಸ್. ಲೋಹಿತಾಶ್ವ ಅವರು ನವೆಂಬರ್ 8ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
1942 ಆಗಸ್ಟ್ 5ರಂದು ತಂದೆ ಸಿದ್ದವೀರಪ್ಪ ಮತ್ತು ತಾಯಿ ಭದ್ರಮ್ಮ ಅವರಿಗೆ ಜನಿಸಿದ ಲೋಹಿತಾಶ್ವ ಬೆಂಗಳೂರು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರವೃತ್ತಿಯಾಗಿ ಸಿನಿಮಾದಲ್ಲೂ ನಟಿಸುತ್ತಿದ್ದರು.
ಪ್ರಾಧ್ಯಾಪಕರಾಗಿ ನಿವೃತ್ತರಾದ ಬಳಿಕ ತುಮಕೂರು ಜಿಲ್ಲೆಯ ಸ್ವಾಗ್ರಾಮದಲ್ಲಿ ಎಲ್ಲವನ್ನೂ ತೊರೆದು ನಿವೃತ್ತಿ ಜೀವನವನ್ನು ಕಳೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಲೋಹಿತಾಶ್ವ ಅವರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಖಳ ನಾಯಕರಾಗಿ, ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಎ.ಕೆ.47, ದಾದಾ, ಎಲ್ಲರಂಥವನಲ್ಲ ನನಗಂಡ, ಏಕಲವ್ಯ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಲೋಹಿತಾಶ್ವ ಅವರು ಕುಟುಂಬದ ಸದಸ್ಯರು, ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹಗಲಿದ್ದಾರೆ.