Monday, September 16, 2024
Google search engine
Homeಮುಖಪುಟಆರ್ಥಿಕ ದುರ್ಬಲ ವರ್ಗದವರಿಗೆ 10ರಷ್ಟು ಮೀಸಲಾತಿ - ಸಂವಿಧಾನಿಕ ತಿದ್ದುಪಡಿಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಆರ್ಥಿಕ ದುರ್ಬಲ ವರ್ಗದವರಿಗೆ 10ರಷ್ಟು ಮೀಸಲಾತಿ – ಸಂವಿಧಾನಿಕ ತಿದ್ದುಪಡಿಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳ ನೇಮಕಾತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ 3.2 ಬಹುಮತದಿಂದ ಎತ್ತಿ ಹಿಡಿದಿದೆ.

ತಿದ್ದುಪಡಿಯ ಸಿಂಧುತ್ವವನ್ನು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ ಮತ್ತು ಜೆ.ಬಿ. ಪರ್ದಿವಾಲಾ ಅವರು ಎತ್ತಿ ಹಿಡಿದಿದ್ದಾರೆ. ಆದರೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ಆರ್ ಭಟ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

103ನೇ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗುವುದಿಲ್ಲ. ಇಡಬ್ಲ್ಯೂಎಸ್ ವ್ಯಾಪ್ತಿಯಿಂದ ಎಸ್.ಇಬಿಸಿ, ಒಬಿಸಿ ಮತ್ತು ಎಸ್.ಸಿ ಎಸ್.ಟಿಗಳನ್ನು ಹೊರತುಪಡಿಸಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು 103ರಲ್ಲಿ ಹೇಳಲಾಗುವುದಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಅವರು ತಿದ್ದುಪಡಿಸಯ ಸಿಂಧುತ್ವವನ್ನು ಎತ್ತಿ ಹಿಡಿಯುತ್ತಾ ಸಾಂವಿಧಾನಿಕ ತಿದ್ದುಪಡಿಯನ್ನು ತಾರತಮ್ಯ ಎಂದು ಹೇಳಾಗುವುದಿಲ್ಲ. ಸ್ವಾತಂತ್ರ್ಯ 75 ವರ್ಷಗಳ ಕೊನೆಯಲ್ಲಿ ಸಮಾಜದ ಹಿತಾಸಕ್ತಿಗಾಗಿ ನಾವು ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ತಿದ್ದುಪಡಿಯನ್ನು ತಾರತಮ್ಯವೆಂದು ಪರಿಗಣಿಸಿದ ನ್ಯಾಯಮೂರ್ತಿ ಎಸ್.ಆರ್.ಭಟ್ ಅವರು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಎಸ್.ಸಿ/ಎಸ್.ಟಿ/ಒಬಿಸಿಗಳಿಂದ ಬಡವರನ್ನು ಇಡಬ್ಲ್ಯೂಎಸ್ ಅಡಿಯಲ್ಲಿ ಮೀಸಲಾತಿ ಪ್ರಯೋಜನವನ್ನು ಪಡೆಯುವುದರಿಂದ ಹೊರಗಿಡುವುದು ತಾರತಮ್ಯವಾಗಿದೆ ಎಂದು ಹೇಳಿದರು. ತಿದ್ದುಪಡಿಯು ಸಮಾನತೆಯ ಸಂಹಿತೆಯ ಹೃದಯಭಾಗದಲ್ಲಿ ಹೊಡೆಯುತ್ತದೆ ಎಂದು ತಿಳಿಸಿದರು.

ಜಸ್ಟಿಸ್ ಭಟ್ ಅವರ ಅಭಿಪ್ರಾಯವನ್ನು ಒಪ್ಪಿದ ಸಿಜೆಐ ಯು.ಯು ಲಲಿತ್, ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯಗಳನ್ನು ನಾನು ಒಪ್ಪುತ್ತೇನೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular