ತೆಲಂಗಾಣದ ಮುನಗೋಡು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಚುನಾವಣೋತ್ತರ ಸಮೀಕ್ಷೆಗಳು ಟಿಆರ್.ಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ಲೇಷಣೆ ನಡೆಸಿದ್ದು ಈ ಸಂಬಂಧ ಟಿಆರ್.ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಬೂತ್ ವಾರು ಗ್ರೌಂಡು ರಿಪೋರ್ಟ್ ಗಳ ಕುರಿತು ಚರ್ಚೆ ನಡೆಸಿದರು.
ಎಲ್ಲಾ ವರದಿಗಳನ್ನು ವಿಶ್ಲೇಷಿಸಿದ ನಂತರ ಉಭಯ ನಾಯಕರು ಪಕ್ಷದ ಅಭ್ಯರ್ಥಿ 15 ಸಾವಿರ ಮತಗಳ ಬಹುಮತದಿಂದ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗೂ ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಮತದಾರರ ಮತದಾನ ಪ್ರಮಾಣವು ಕಳಪೆಯಾಗಿದೆ ಮತ್ತು ಇದು ಟಿಆರ್.ಎಸ್ ನ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ತೀರ್ಮಾನಕ್ಕೆ ಉಭಯ ನಾಯಕರು ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚಂಡೂರು ಪುರಸಭೆಯಲ್ಲಿ ಒಟ್ಟಾರೆ ಶೇ.93ರಷ್ಟು ಮತದಾನವಾಗಿದೆ. ಚೌಟುಪ್ಪಲ್ ಪುರಸಭೆಯಲ್ಲಿ ಶೇ.73.80ರಷ್ಟು ಮತದಾನವಾಗಿದೆ ಎಂದು ಟಿಆರ್.ಎಸ್ ನಾಯಕರು ಹೇಳಿದರು.
ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಟಿಆರ್.ಎಸ್ ಪರವಾಗಿ ಮತ ಚಲಾಯಿಸಿದ್ದು ಭಾನುವಾರ ನಡೆಯಲಿರುವ ಮತ ಎಣಿಕೆಯಲ್ಲಿ ಪಕ್ಷಕ್ಕೆ ಗೆಲುವು ಖಚಿತ ನಾಯಕರು ನಂಬಿದ್ದಾರೆ. ಆಸರಾ, ರೈತ ಬಂಧು, ರೈತ ಬಿಮಾ, ಕಲ್ಯಾಣ ಲಕ್ಷ್ಮಿ ಮತ್ತು ಕೆಸಿಆರ್ ಕಿಟ್ ಗಳಂತಹ ಕಲ್ಯಾಣ ಯೋಜನೆಗಳ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.