ಗುಜರಾತ್ ನ ಮೋರ್ಬಿ ನಗರದ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು ಕನಿಷ್ಠ 91 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತೂಗು ಸೇತುವೆಯನ್ನು ದುರಸ್ತಿ ಮಾಡಿ ನಾಲ್ಕು ದಿನಗಳ ಹಿಂದೆ ಓಡಾಟಕ್ಕೆ ಅವಕಾಶ ನೀಡಿದ ನಂತರ ಸೇತುವೆ ಕುಸಿದು ಬಿದ್ದಿದೆ. ಸೇತುವೆ ಮೇಲೆ ಕಿಕ್ಕಿರದ ಜನರು ಓಡಾಡುತ್ತಿದ್ದಾಗ ಸೇತುವೆ ಕುಸಿದಿದೆ ಎಂದು ಹೇಳಲಾಗಿದೆ.
ಕೆಲವರು ಸೇತುವೆಯ ಮೇಲೆ ಹಾರಿ ಅದರ ದೊಡ್ಡ ತಂತಿಗಳನ್ನು ಎಳೆಯುತ್ತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸೇತುವೆಯ ಮೇಲೆ ಭಾರಿ ಜನಸಂದಣಿಯಿಂದಾಗಿ ಸೇತುವೆ ಕುಸಿದಿರಬಹುದು ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರು ಮಾತನಾಡಿ, ಕುಸಿತವು ಇದ್ದಕ್ಕಿದ್ದಂತೆ ಸಂಭವಿಸಿದೆ ಮತ್ತು ಸೇತುವೆಯ ಮೇಲೆ ಹೆಚ್ಚಿನ ಜನರು ಕಾರಣವಾಗಿರಬಹುದು ಎಂದು ಹೇಳಿದ್ದಾರೆ.