ಆಡಳಿತಾರೂಢ ಟಿಆರ್.ಎಸ್ ನ 20-30 ಶಾಸಕರನ್ನು ಖರೀದಿಸಲು ಮತ್ತು ತಮ್ಮ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಆರೋಪಿಸಿದ್ದಾರೆ.
ದೆಹಲಿಯ ದಲ್ಲಾಳಿಗಳು ಟಿಆರ್.ಎಸ್ ನ ಪ್ರತಿಯೊಬ್ಬ ಶಾಸಕರಿಗೆ 100 ಕೋಟಿ ನೀಡಿ ಖರೀದಿಗೆ ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಪ್ರತಿ ಶಾಸಕರನ್ನು 100 ಕೋಟಿ ರೂಪಾಯಿಗೆ ಖರೀದಿಸಲು ದಲ್ಲಾಳಿಗಳನ್ನು ಕಳುಹಿಸಿದ್ದಾರೆ. ಬಿಜೆಪಿ 20-30 ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಶಾಸಕರು ಖರೀದಿಸುವ ಮೂಲಕ ಕೆಸಿಆರ್ ಸರ್ಕಾರ ಉರುಳಿಸುವ ಸಂಚು ನಡೆದಿದೆ. ತೆಲಂಗಾಣವನ್ನು ಅತಿಕ್ರಮಿಸುತ್ತಾರೆ ಎಂದು ಆಪಾದಿಸಿದರು.
ನಾಲ್ವರು ಟಿಆರ್.ಎಸ್ ಶಾಸಕರನ್ನು ಬೇಟೆಯಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಒಂದು ದಿನದ ನಂತರ ಕೆಸಿಆರ್ ಹೇಳಿಕೆ ಹೊರಬಂದಿದೆ.