2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 27 ವಿವಿಧ ಕ್ಷೇತ್ರಗಳ 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1ರಂದು ಪ್ರಧಾನ ಮಾಡಲಾಗುವುದು.
ಪ್ರಶಸ್ತಿಯನ್ನು ಅಂಗವಿಕಲ ಈಜುಪಟು ರಾಘವೇಂದ್ರ, ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಸೇರಿ 67 ಸಾಧಕರಿಗೆ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ
ಚಲನಚಿತ್ರ ನಟರಾದ ದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರು, ಸೋಲಿಗರ ಮಾದಮ್ಮ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡಪಾಣಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಲು ಮರಗಳನ್ನು ಬೆಳೆಸಿದ ಸಾಧಕ ಸಾಲುಮರದ ನಿಂಗಣ್ಣ, ಯಕ್ಷಗಾನ ಕ್ಷೇತ್ರದಿಂದ ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾಧ್ಯಮ ಕ್ಷೇತ್ರದಿಂದ ಪತ್ರಕರ್ತೆ ಎಚ್.ಆರ್.ಶ್ರೀಶಾ, ಜಿ.ಎಂ. ಶಿರಹಟ್ಟಿ ಅವರಿಗೆ ನವೆಂಬರ್ 1ರಂದು ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.
ಪ್ರಶಸ್ತಿ ಮೊತ್ತ 5 ಲಕ್ಷ ರೂಪಾಯಿ ನಗದು, 25 ಗ್ರಾಂ ಚಿನ್ನ ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.