Sunday, September 8, 2024
Google search engine
Homeಮುಖಪುಟಸಚಿವ ಬಾಲಗೋಪಾಲ್ ಅವರನ್ನು ವಜಾಗೊಳಿಸಲು ಕೇಳಿದ ರಾಜ್ಯಪಾಲ - ನಿರಾಕರಿಸಿದ ಕೇರಳ ಸಿ.ಎಂ. ಪಿಣರಾಯಿ ವಿಜಯನ್

ಸಚಿವ ಬಾಲಗೋಪಾಲ್ ಅವರನ್ನು ವಜಾಗೊಳಿಸಲು ಕೇಳಿದ ರಾಜ್ಯಪಾಲ – ನಿರಾಕರಿಸಿದ ಕೇರಳ ಸಿ.ಎಂ. ಪಿಣರಾಯಿ ವಿಜಯನ್

ಕೇರಳದ ಹಣಕಾಸು ಸಚಿವ ಬಾಲಗೋಪಾಲ್ ಅವರನ್ನು ವಜಾಗೊಳಿಸುವಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಮಾಡಿದ್ದಾರೆ. ಹಣಕಾಸು ಸಚಿವರು ಪ್ರಮಾಣ ವಚನ ಉಲ್ಲಂಘಿಸಿದ್ದು ಭಾರತದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಬಾಲಗೋಪಾಲ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ರಾಜ್ಯಪಾಲರು ಅಕ್ಟೋಬರ್ 25 ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಬಾಲಗೋಪಾಲ್ ಇತ್ತೀಚೆಗೆ ಟೀಕೆಗಳನ್ನು ಉಲ್ಲೇಖಿಸಿರುವ ಅವರು ಬಾಲಗೋಪಾಲ್ ಸಚಿವರಾಗಿ ಮುಂದುವರೆಯುವುದರ ಬಗ್ಗೆ ಕಳೆದುಕೊಂಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 17ರಂದು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿ ಬೆದರಿಕೆ ಹಾಕುತ್ತಿರುವಂತೆ ಕಂಡುಬಂದಿತ್ತು. ಹೀಗಾಗಿ ಸಿಎಂ ಮತ್ತು ಮಂತ್ರಿಮಂಡಳಿಗೆ ರಾಜ್ಯಪಾಲರಿಗೆ ಸಲಹೆ ನೀಡುವ ಹಕ್ಕಿದೆ. ಆದರೆ ರಾಜ್ಯಪಾಲರ ಕಚೇರಿಯ ಘನತೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲರ ಅಧಿಕಾರವು ಬಹಳ ಸೀಮಿತವಾಗಿದೆ ಎಂದು ಹೇಳಿದ್ದರು. ಯಾರಾದರೂ ಸಂವಿದಾನ ಮತ್ತು ಅಸ್ತಿತ್ವದಲ್ಲಿರುವ ಕಾನೂನು ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸಿದ್ದು ಅದು ಮಾನ್ಯ ಎಂದು ಹೇಳಲಾಗುವುದಿಲ್ಲ ಎಂದು ಪಿಣರಾಯಿ ಹೇಳಿದರು.

ಸಚಿವ ಕೆ.ಎನ್.ಬಾಲಗೋಪಾಲ್ ಅವರು ವಿಶ್ವವಿದ್ಯಾಲಯದಲ್ಲಿ ಮಾತನಾಡಿ, ರಾಜ್ಯಪಾಲರನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದಿಂದ ಬಂದವರಿಗೆ ಕೇರಳ ಶಿಕ್ಷಣ ಸಂಸ್ಥೆಗಳನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕಿಡಿಕಾರಿದ್ದರು. ಸಚಿವರ ಈ ಹೇಳಿಕೆ ರಾಜ್ಯಪಾಲರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular