ಭಾರತ್ ಜೋಡೋ ಯಾತ್ರೆಯಲ್ಲಿ ತೆರಳುತ್ತಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿಯನ್ನು ಬೇಧಿಸಿ ದಿಢೀರ್ ಪತ್ರಕರ್ತರತ್ತ ತೆರಳಿ ಕೈಕುಲುಕಿದ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.
ಪತ್ರಕರ್ತರ ಕೈಕುಲುಕುತ್ತಿದ್ದಂತೆಯೇ ಮಾಧ್ಯಮದವರು ಅತ್ಯಂತ ಖುಷಿಯಾದರು. ರಾಹುಲ್ ಗಾಂಧಿ ಅವರೊಂದಿಗೆ ಹಸ್ತಲಾಘವ ಮಾಡಲು ಮಾಧ್ಯಮದವರು ಮುಗಿಬಿದ್ದಿದ್ದಾರೆ.
ಕರ್ನಾಟಕದಿಂದ ನಿರ್ಗಮಿಸಿದ ರಾಹುಲ್ ಗಾಂಧಿ ತೆಲಂಗಾಣದಲ್ಲಿ ಯಾತ್ರೆ ಮುಂದುವರೆಸಿದ್ದಾರೆ. ಯಾತ್ರೆಯಲ್ಲಿ ಸಾಗುತ್ತಿದ್ದ ವೇಳೆ ರಾಹುಲ್ ಗಾಂಧಿ ಭದ್ರತಾ ಸಿಬ್ಬಂದಿಯನ್ನು ಬೇಧಿಸಿ ಪತ್ರಕರ್ತರತ್ತ ತೆರಳಿ ಹಸ್ತಲಾಘವ ಮಾಡಿ ಎಲ್ಲರ ಗಮನ ಸೆಳೆದರು.
ಭಾರತ್ ಜೋಡೋ ಯಾತ್ರೆಯಲ್ಲಿ ಅತ್ಯಂತ ಲವಲವಿಕೆಯಿಂದ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ಅವರು ನಡೆಯುವ ವೇಗಕ್ಕೆ ತಕ್ಕ ಹಾಗೆ ಬೆಂಬಲಿಗರು ನಡೆಯಲಾರರು ಎಂಬುದನ್ನು ಸಾಬೀತುಪಡಿಸಿದ್ದಾರೆ. ರಾಹುಲ್ ದೂರ ದೂರ ಹೆಜ್ಜೆ ಹಾಕಿದರೆ ಬೇರೆಯವರು ಓಡಬೇಕಾಗುತ್ತದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3750 ಕಿಲೇ ಮೀಟರ್ ಯಾತ್ರೆ ನಡೆಯಲಿದೆ. ತಮಿಳುನಾಡು, ಕೇರಳ, ಕರ್ನಾಟಕವನ್ನು ದಾಟಿರುವ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಸಾಗುತ್ತಿದೆ.
ಯಾತ್ರೆಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಮಕ್ಕಳು, ರೈತರು, ಹೋರಾಟಗಾರರು, ಸಾಹಿತಿಗಳು, ಪ್ರಗತಿಪರ ಚಿಂತಕರು, ದಲಿತ ಮುಖಂಡರು ಕೂಲಿ ಕಾರ್ಮಿಕರು ಹೀಗೆ ಹಲವು ವಿಭಾಗಗಳೊಂದಿಗೆ ಸಂವಾದ ನಡೆಸುತ್ತಾ, ಮಕ್ಕಳನ್ನು ಭುಜದ ಮೇಲೆ ಹೊತ್ತು ಯಾತ್ರೆಯಲ್ಲಿ ಅತ್ಯಂತ ಉತ್ಸಾಹದಿಂದ ಸಾಗುತ್ತಿರುವುದು ಎಲ್ಲರಲ್ಲೂ ಬೆರಗು ಮೂಡಿಸಿದೆ.