Monday, September 16, 2024
Google search engine
Homeಮುಖಪುಟದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳ ಕುರಿತು ಸುಪ್ರೀಂ ಕೋರ್ಟ್ ಕಳವಳ

ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳ ಕುರಿತು ಸುಪ್ರೀಂ ಕೋರ್ಟ್ ಕಳವಳ

ದೇಶದಲ್ಲಿ ದ್ವೇಷದ ಭಾಷಣಗಳು ಹೆಚ್ಚುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು 21ನೇ ಶತಮಾನದಲ್ಲಿ ನಾವು ಧರ್ಮದ ಹೆಸರಿನಲ್ಲಿ ಎಲ್ಲಿಗೆ ತಲುಪಿದ್ದೇವೆ. ಇದು ದುರಂತ ಎಂದು ಹೇಳಿದೆ.

ಮುಸ್ಲೀಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಪ್ರಚೋದನಕಾರಿ ಭಾಷಣಗಳಲ್ಲಿ ತೊಡಗಿರುವವರ ವಿರುದ್ಧ ಮತ್ತು ಅಂತಹ ಭಾಷಣಕಾರರಿಗೆ ವೇದಿಕೆ ಒದಗಿಸುವ ಸಂಘಟನೆಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೋರಿ ಶಾಹೀನ್ ಅಬ್ದುಲ್ಲಾ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮೇಲಿನಂತೆ ತಿಳಿಸಿದೆ.

ದೆಹಲಿಯಲ್ಲಿ 25 ವರ್ಷದ ಯುವಕನ ಹತ್ಯೆಯ ನಂತರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರ್ಯಾಲಿಯು ದ್ವೇಷದ ಭಾಷಣದ ಕೇಂದ್ರವಾಗಿ ಮಾರ್ಪಟ್ಟಿತ್ತು ಮತ್ತು ಭಾಷಣಕಾರರಲ್ಲಿ ಒಬ್ಬರಾದ ಜಗತ್ ಗುರು ಯೋಗೇಶ್ವರ್ ಆಚಾರ್ಯ ಅವರು ಜನರ ಶಿರಚ್ಛೇದ ಮಾಡಲು ಮತ್ತು ದಾಳಿ ನಡೆಸುವವರ ಕೈಗಳನ್ನು ಕತ್ತರಿಸಿ ಎಂದು ಕರೆ ನೀಡಿದ್ದರು.

ಭಾಷಣಕಾರ ಮಹಂತ ಸವಲ್ ಕಿಶೋರ್ ದಾಸ್ ವರದಿ ಪ್ರಕಾರ ಜನರು ಬಂದೂಕುಗಳನ್ನು ಪಡೆಯಲು ಕೇಳಿದರು. ಪರವಾನಿಗೆಯೊಂದಿಗೆ ಅಥವಾ ಇಲ್ಲದೆ ಬಂದೂಕುಗಳು ಇರಬೇಕು ಎಂದು ಹೇಳಿದ್ದರು.

ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ಮತ್ತು ಧರ್ಮದ ಕುರಿತು ತಟಸ್ಥವಾಗಿರುವ ದೇಶಕ್ಕೆ ದ್ವೇಷದ ಹೇಳಿಕೆಗಳು ಬಹಳ ಗೊಂದಲವನ್ನುಂಟು ಮಾಡುತ್ತವೆ ಎಂದು ಹೇಳಿದ್ದಾರೆ ಎಂದು ನ್ಯೂಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular