ತುಮಕೂರು ನಗರದಲ್ಲಿ ತುಮಕೂರು ಜಿಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಕೆಆರ್ ಎಸ್ ಪಕ್ಷದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ. ಎಲ್ಲಿಯೂ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನ್ಯಾಯಬೆಲೆ ಅಂಗಡಿಗಳಿಗಳಲ್ಲಿ ಕಿರುಕುಳ ನೀಡಿಲ್ಲ ಮತ್ತು ನೀಡುವುದೂ ಇಲ್ಲ ಕೆಆರ್.ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧೂ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಯಾವ ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ, ಮೊಸ, ವಂಚನೆ, ಭ್ರಷ್ಟಾಚಾರ ನಡೆಯುತ್ತಿದೆಯೋ ಅಂತ ನ್ಯಾಯ ಬೆಲೆ ಅಂಗಡಿ ವಿರುದ್ಧ ಆಪರೇಷನ್ ವೀರಾಚಾರಿ ಕಾರ್ಯಾಚರಣೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಕೆಆರ್ ಎಸ್ ಪಕ್ಷದ ವಿರುದ್ಧ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದವರು ಹಮ್ಮಿಕೊಂಡಿರುವ ಪ್ರತಿಭಟನೆಯೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿ ಎಂಬುವಂತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಾವೇ ಹೇಳಿರುವಂತೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಮತ್ತು ಸೂಕ್ತ ಕಮಿಷನ್ ಅನ್ನು ಪಡೆಯಲು ಹೋರಾಟ ಮಾಡಿದರೆ ಅದಕ್ಕೆ ಕೆಆರ್ ಎಸ್ ಪಕ್ಷ ಬೆಂಬಲಿಸುತ್ತದೆ ಎಂದಿದ್ದಾರೆ.
ಸರ್ಕಾರದಿಂದ ವಂಚನೆಗೊಳಗಾಗುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರ ಹೋರಾಡಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಿದ್ಧವಾಗಿದೆ. ಸರ್ಕಾರ ಪ್ರತಿ ಕ್ವಿಂಟಾಲ್ ಗೆ 300 ರೂ. ಕಮಿಷನ್ ನ್ಯಾಯಬೆಲೆ ಅಂಗಡಿಯವರಿಗೆ ನೀಡಬೇಕು. ಅವರಿಗೆ ದಕ್ಕಬೇಕಾದ ಕಮಿಷನ್ ಅನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿ ತಿಂಗಳು ಬಿಡುಗಡೆ ಮಾಡಬೇಕು. ಹಾಗೆಯೇ ರಾಜ್ಯದಲ್ಲಿ ಪಡಿತರ ಫಲಾನುಭವಿಗಳಿಗೆ ಸರ್ಕಾರದ ನಿಯಮದಂತೆ ಸೂಕ್ತ ರೀತಿಯಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಯನ್ನು ಕೆಆರ್ ಎಸ್ ಪಕ್ಷ ಸನ್ಮಾನಿಸುತ್ತದೆ ಎಂದರು.
ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮುದ್ರಿಸಿರುವಂತೆ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಕೆಆರ್ ಎಸ್ ಪಕ್ಷದ ಬೆಂಬಲ ಕೋರಿದರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪರವಾಗಿ ನಿಲ್ಲುತ್ತೇವೆ.ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗದೆ ಭ್ರಷ್ಟಾಚಾರದಲ್ಲಿ ತೊಡಗಿದರೆ ಇದನ್ನು ಕೆಆರ್ ಎಸ್ ಸಹಿಸುವುದಿಲ್ಲ. ಸರ್ಕಾರದಿಂದ ಬರಬೇಕಾದ ಸೌಲಭ್ಯ ಕೊಡಿಸಲು ಸರ್ಕಾರದ ವಿರುದ್ಧ ಹೋರಾಡಲು ಕೆಆರ್ ಎಸ್ ಬೆಂಬಲವಿದೆ ಎಂದರು.
ಸರ್ಕಾರದಿಂದ ಪ್ರತಿ ತಿಂಗಳು ಬರುವ ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳಿಗೆ ಸಿಗಬೇಕಾದ ಸವಲತ್ತುಗಳು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಹಲವು ತಿಂಗಳುಗಳು ಕಳೆದರೂ ಅವರಿಗೆ ಬರಬೇಕಿದ್ದ ಕಮಿಷನ್ ಹಣ ದಕ್ಕದೆ ನ್ಯಾಯಬೆಲೆ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಬೇರೆ ರಾಜ್ಯಗಳ ಸರ್ಕಾರವು ಅಲ್ಕಿನ ನ್ಯಾಯಬೆಲೆ ಅಂಗಡಿಗೆ ಕ್ವಿಂಟಾಲ್ ಗೆ 300 ರೂಪಾಯಿವರೆಗೂ ಕಮಿಷನ್ ಹಣ ಕೊಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬರಬೇಕಾದ ಹಣವೇ ಅವರ ಕೈ ಸೇರುತ್ತಿಲ್ಲ.
ಸರ್ಕಾರ ನ್ಯಾಯ ಬೆಲೆ ಅಂಗಡಿಯವರಿಗೆ ನೀಡುತ್ತಿರುವ ಕಮಿಷನ್ ದಿನನಿತ್ಯ ಕರೆಂಟ್ ಬಿಲ್, ಬಾಡಿಗೆ, ಹಮಾಲಿಗಾರರಿಗೆ ನಿಗದಿತ ಸಮಯಕ್ಕೆ ನೀಡಬೇಕಾದ ಕೂಲಿಗೆ ಸಾಕಾಗಿಲುತ್ತಿಲ್ಲ. ನ್ಯಾಯಬೆಲೆ ಅಂಗಡಿಗೆ ಆಹಾರ ಸರಬರಾಜು ಇಲಾಖೆಯಿಂದಲೇ ಉಚಿತ ವಿದ್ಯುತ್ ಹಾಗೂ ಇಂತಿಷ್ಟು ಬಾಡಿಗೆಯನ್ನೂ ನೀಡಬೇಕು. ಇಡೀ ರಾಜ್ಯದಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಏಕ ನೀತಿಯ ಕಮಿಷನ್ ನೀಡಬೇಕು. ತಾರತಮ್ಯ ಮತ್ತು ನ್ಯಾಯಬೆಲೆ ಅಂಗಡಿಗಳ ಮೇಲಿನ ಅಧಿಕಾರಿಗಳ ದರ್ಪವನ್ನು ಕೆ.ಆರ್.ಎಸ್ ಖಂಡಿಸುತ್ತದೆ. ಈ ಅನ್ಯಾಯದ ವಿರುದ್ಧ ಸರ್ಕಾರದ ವಿರುದ್ಧ ಹೋರಾಡುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸಂಪೂರ್ಣ ಬೆಂಬಲಿಸುತ್ತದೆ. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಕೆ.ಆರ್ .ಎಸ್ ಪಕ್ಷ ಸದಾ ಸಿದ್ಧ ಎಂದರು.