ಹವಾಮಾನ ವೈಪರೀತ್ಯದಿಂದ ಕೇದಾರನಾಥ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ವೊಂದು ಬೆಟ್ಟಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಸಂಭವಿಸಿದೆ.
ದೆಹಲಿ ಮೂಲದ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಒಡೆತನದ ಹೆಲಿಕಾಪ್ಟರ್ ಕೇದಾರನಾಥ ದಿಂದ ಹಿಂತಿರುಗುತ್ತಿದ್ದಾಗ ಗರುಡ್ ಚಿಟ್ಟಿ ಬಳಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ ಪ್ರಾಥಮಿಕ ವರದಿಗಳು ಸ್ಪಷ್ಟಪಡಿಸಿವೆ.
ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಜಿಲ್ಲಾ ಪೊಲೀಸ್ ತಂಡಗಳೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದ್ದು ಶೋಧ ಕಾರ್ಯ ನಡೆಸಲು ಬೀಳುತ್ತಿರುವ ಮಳೆ ಅಡ್ಡಿಯಾಗಿದೆ. ಹೆಲಿಕಾಪ್ಟರ್ ಪತನದ ವಿಡಿಯೋವನ್ನು ಟೈಮ್ಸ್ ನೌ ಅಪ್ ಲೋಡ್ ಮಾಡಿದೆ.
ಲಿಂಚೋಲಿ ಮತ್ತು ಗರುಡ್ ಚಿಟ್ಟಿ ನಡುವೆ ಈ ಘಟನೆ ಸಂಭವಿಸಿದ್ದು ಕೇದಾರನಾಥ ಮತ್ತು ಲಿಂಚೋಲಿಯ ರಕ್ಷಣಾ ತಂಡಗಳು ಸ್ಥಳಕ್ಕೆ ಎಂದು ಎನ್.ಡಿಆರ್.ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ. ಹೆಲಿಕಾಪ್ಟರ್ ಆರ್ಯನ್ ಕಂಪನಿಯಾಗಿದ್ದು, ಅದರಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ದಟ್ಟ ಮಂಜಿನ ಕಾರಣ ಮಾರ್ಗ ಕಾಣದೆ ಹೆಲಿಕಾಪ್ಟರ್ ಬೆಟ್ಟಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೂರ್ವ ರಾಮಾನುಜ್, ಕೃತಿ, ಉರ್ವಿ, ಸುಜಾತ, ಪ್ರೇಮ್ ಕುಮಾರ್, ಕಲಾ ಮತ್ತು ಪೈಲಟ್ ಅನಿಲ್ ಸಿಂಗ್ ಎಂದು ಗುರುತಿಸಲಾಗಿದೆ.
ಅಪಘಾತದ ಬಗ್ಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ.ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಅಪಘಾತದಿಂದ ದುಃಖವಾಗಿದೆ. ಈ ದುರಂತ ನನಗೆ ನೋವು ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.