Saturday, October 19, 2024
Google search engine
Homeಮುಖಪುಟಐಆರ್.ಸಿಟಿಸಿ ಹಗರಣ - ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸಲು ದೆಹಲಿ ನ್ಯಾಯಾಲಯ ನಿರಾಕರಣೆ

ಐಆರ್.ಸಿಟಿಸಿ ಹಗರಣ – ತೇಜಸ್ವಿ ಯಾದವ್ ಜಾಮೀನು ರದ್ದುಗೊಳಿಸಲು ದೆಹಲಿ ನ್ಯಾಯಾಲಯ ನಿರಾಕರಣೆ

ಐಆರ್.ಸಿ.ಟಿಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಮನವಿಯ ಮೇರೆಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ.

ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್, ಯಾದವ್ ಜಾಗರೂಕತೆಯಿಂದ ಸೂಕ್ತವಾದ ಪದಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಯಾದವ್ ಅವರು ಕಾನೂನಿನ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದರು ಮತ್ತು ಸಂಪೂರ್ಣ ತನಿಖೆ ಮತ್ತು ಅದರ ನಂತರದ ವಿಚಾರಣೆಯನ್ನು ವಿಫಲಗೊಳಿಸಿದರು. ತನಗೆ ನೀಡಲಾದ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ದುರುಪಯೋಗಪಡಿಸಿಕೊಂಡರು ಎಂದು ಸಿಬಿಐ ಹೇಳಿದೆ.

ಯಾದವ್ ಅವರಿಗೆ ಈ ಹಿಂದೆ ನೀಡಲಾದ ಜಾಮೀನಿನಲ್ಲಿ ನಿಗದಿಪಡಿಸಿದ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂದು ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ನಿರ್ದೇಶನಗಳನ್ನು ನೀಡಿತು.

ನಾನು ವಿರೋಧ ಪಕ್ಷದಲ್ಲಿದ್ದೇನೆ ಮತ್ತು ತಪ್ಪಿನ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ನನ್ನ ಕರ್ತವ್ಯವಾಗಿದೆ. ಪ್ರಸ್ತುತ ಸರ್ಕಾರವು ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲಾ ವಿರೋಧ ಪಕ್ಷಗಳು ಇದನ್ನು ಅನುಭವಿಸುತ್ತಿವೆ ಎಂದು ಯಾದವ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಎರಡು ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಹೋಟೆಲ್ ಗಳ ಕಾರ್ಯಾಚರಣೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗೆ ನೀಡುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ವಿಷಯದಲ್ಲಿ ಅವರ ವಿರುದ್ಧ ನೀಡಲಾದ ಸಮನ್ಸ್ ಗೆ ಅನುಗುಣವಾಗಿ ನ್ಯಾಯಾಲಯ ಯಾದವ್ ಗೆ 2018ರ ಅಕ್ಟೋಬರ್ ನಲ್ಲಿ ಜಾಮೀನು ನೀಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular