ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕೆರೆ ಕೋಡಿ ಬಿದ್ದಿದ್ದು ಪಕ್ಕದಲ್ಲೇ ತಗ್ಗಿನಲ್ಲಿರುವ ಸೋಲಾರ್ ಪಾರ್ಕ್ ಜಲಾವೃತಗೊಂಡಿದೆ.
ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ನ ಬಿಸಿಲನ್ನು ಹೀರಿಕೊಳ್ಳುವ ಸೋಲಾರ್ ಪ್ಯಾನಲ್ ಗಳು ನೀರಿನಿಂದ ಮುಳುಗಿ ಹೋಗಿವೆ. ಎಡ ಭಾಗದ ಸೋಲಾರ್ ಪಾರ್ಕ್ ಸಂಪೂರ್ಣ ಜಲಾವೃತಗೊಂಡಿದೆ.
ಸೋಲಾರ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮುಳುಗಡೆಯಾಗಿರುವ ಸೋಲಾರ್ ಪಾರ್ಕ್ ನಲ್ಲಿ ಈಜುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಪಳವಳ್ಳಿ ಕೆರೆಯ ಮುಂಭಾಗದಲ್ಲಿ ಕೋಡಿ ನೀರು ಹರಿದುಹೋಗುತ್ತಿದೆ. ಮಳೆ ಬಿದ್ದ ಪರಿಣಾಮ ಪಳವಳಿ ಕೆರೆ ಹಲವು ವರ್ಷಗಳ ನಂತರ ಕೋಡಿ ಬಿದ್ದಿದ್ದು ತಗ್ಗು ಪ್ರದೇಶದಲ್ಲಿರುವ ಸೋಲಾರ್ ಪಾರ್ಕ್ ಮುಳುಗಡೆಯಾಗಿ ಕೆರೆಯಂತಾಗಿದೆ.
ಸೋಲಾರ್ ಪಾರ್ಕ್ ನಲ್ಲಿ ಇಬ್ಬರು ಸಿಬ್ಬಂದಿಗಳು ನೀರಿನಲ್ಲಿ ಮುಳುಗಡೆಯಾಗಿರುವ ಸೋಲಾರ್ ಪಾರ್ಕ್ ಪ್ಯಾನಲ್ ಗಳನ್ನು ಪರಿಶೀಲನೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನೀರು ಹರಿಯುತ್ತಿದ್ದ ಕೋಡಿಗೆ ಹೋದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದೆ.