Saturday, October 19, 2024
Google search engine
Homeಮುಖಪುಟಭಾಷಾ ಯುದ್ದ ಕೈಬಿಡಿ - ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಗ್ರಹ

ಭಾಷಾ ಯುದ್ದ ಕೈಬಿಡಿ – ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಗ್ರಹ

ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿ ಹೇರುವ ಮೂಲಕ ಕೇಂದ್ರ ಸರ್ಕಾರ ಭಾಷಾ ಯುದ್ದ ಆರಂಭಿಸಿದೆ. ಹಾಗಾಗಿ ಇಂತಹ ಪ್ರಯತ್ನಗಳನ್ನು ಕೈಬಿಟ್ಟು ಭಾರತದ ಏಕತೆಯನ್ನು ಎತ್ತಿ ಹಿಡಿಯುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸಂಸದೀಯ ಸಮಿತಿಯು ಎಲ್ಲಾ ಕೇಂದ್ರೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಬದಲಿಗೆ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಬೇಕೆಂಬ ಶಿಫಾರಸ್ಸಿನ ಕುರಿತು ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಸ್ಥೆಗಳಲ್ಲಿ ಐಐಟಿಗಳು, ಐಐಎಂಗಳು, ಎಐಐಎಂಎಸ್ ಮತ್ತು ಕೇಂದ್ರೀಯ ವಿದ್ಯಾಲಯಗಳು ಸೇರಿವೆ. ಹಿಂದಿ ಭಾಷಾ ಹೇರಿಕೆ ಮಾಡಿದರೆ ದೇಶದ ಏಕತೆಯನ್ನು ನಾಶಪಡಿಸುತ್ತದೆ ಎಂದು ತಿಳಿಸಿದರು.

ಸಂವಿಧಾನದ ಎಂಟನೇ ಶೆಡ್ಯೂಲ್ ನಲ್ಲಿ ತಮಿಳು ಸೇರಿದಂತೆ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸುವ ಅರ್ಹತೆ ನೀಡಲಾಗಿದೆ ಎಂಬ ಅಂಶವನ್ನು ಗಮನ ಸೆಳೆದಿರುವ ಸ್ಟಾಲಿನ್ ಸಂಸದೀಯ ಸಮಿತಿಯು ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯಾಗಿ ಶಿಫಾರಸು ಮಾಡುವ ಅವಶ್ಯಕತೆ ಎಲ್ಲಿಂದ ಉದ್ಬವಿಸಿತು ಎಂದು ಕೇಳಿದರು.

ಹಿಂದಿಗೆ ಆದ್ಯತೆ ನೀಡಲು ಒಕ್ಕೂಟ ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲೀಷ್ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ಏಕೆ ಸ್ಥಗಿತಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಇಡೀ ದೇಶಕ್ಕೆ ಒಂದು ಭಾಷೆಯನ್ನು ಸಾಮಾನ್ಯವಾಗಿಸುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ಪ್ರತಿಪಾದಿಸಿದ ಸ್ಟಾಲಿನ್ ಅದನ್ನು ಕಡ್ಡಾಯಗೊಳಿಸುವುದು ಕೇವಲ ಹಿಂದಿ ಭಾಷಿಕರು ಮಾತ್ರ ಭಾರತದ ನಿಜವಾದ ನಾಗರಿಕರು ಮತ್ತು ಇತರೆ ಭಾಷೆಗಳನ್ನು ಮಾತನಾಡುವವರು ಎರಡನೇ ದರ್ಜೆಯ ನಾಗರಿಕರು ಎಂದು ಹೇಳುವುದಕ್ಕೆ ಸಮಾನವಾಗಿರುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular