Saturday, October 19, 2024
Google search engine
Homeಮುಖಪುಟಬಿಜೆಪಿ ವಿರುದ್ದ ವಾಗ್ದಾಳಿ - ಮಂಡಲ-ಕಮಂಡಲ ಚರ್ಚೆ ಹುಟ್ಟುಹಾಕಿದ ಲಾಲೂ ಪ್ರಸಾದ್ ಯಾದವ್

ಬಿಜೆಪಿ ವಿರುದ್ದ ವಾಗ್ದಾಳಿ – ಮಂಡಲ-ಕಮಂಡಲ ಚರ್ಚೆ ಹುಟ್ಟುಹಾಕಿದ ಲಾಲೂ ಪ್ರಸಾದ್ ಯಾದವ್

ಬಿಜೆಪಿ ಸಮಾಜದಲ್ಲಿ ಕೋಮುದ್ವೇಷವನ್ನು ಹರಡುತ್ತಿದೆ ಮತ್ತು ಅದು ಸಾಮಾಜಿಕ ನ್ಯಾಯ ಹಾಗೂ ದುರ್ಬಲ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಗೆ ವಿರುದ್ಧವಾಗಿದೆ ಎಂದು ಹೇಳುವ ಮೂಲಕ ಆರ್.ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಂಡಲ ವರ್ಸಸ್ ಕಮಂಡಲ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ತಮ್ಮ ವಿರುದ್ಧ ಸಿಬಿಐ ಮತ್ತು ಇಡಿ ಕ್ರಮಗಳು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಫಲಿತಾಂಶವಾಗಿದೆ ಎಂದು ಲಾಲು ಹೇಳಿದ್ದಾರೆ.

ಇತರೆ ಹಿಂದುಳಿದ ವರ್ಗಗಳ ಕೋಟಾದ ವಿಷಯವಾಗಿ 90ರ ದಶಕದಲ್ಲಿ ರಾಮ ಮಂದಿರ ಚಳವಳಿಗೆ ಬಿಜೆಪಿಯ ದೊಡ್ಡ ಪ್ರತಿರೋಧಿಸುವ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಅಂದಿನಿಂದ ಇಂದಿನವರೆಗೆ ಬಿಜೆಪಿ ಮೀಸಲಾತಿಗೆ ವಿರುದ್ದವಾಗಿದೆ ಎಂದು ಆರ್.ಜೆಡಿ ಬಹಿರಂಗ ಸಮಾವೇಶದಲ್ಲಿ ಆರೋಪಿಸಿದರು.

74 ವರ್ಷದ ಲಾಲೂ ಒಬಿಸಿಗಳಿಗೆ ಮೀಸಲಾತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು. ಬಿಜೆಪಿ ವಿರುದ್ಧ ಮಂಡಲ ವರ್ಸಸ್ ಕಮಂಡಲ ವಿವಾದ ಹುಟ್ಟು ಪಡೆದಿದೆ ಎಂದು ವಾಗ್ದಾಳಿ ನಡೆಸಿದರು.

ಒಬಿಸಿಗಳಿಗೆ ಮೇಸಲಾತಿಯನ್ನು ಶಿಫಾರಸು ಮಾಡುವ ವರದಿಯ ಹಿಂದೆ ಮಂಡಲ ಎಂದರೆ ಬಿಪಪಿ ಮಂಡಲ್ ಎಂಬ ವ್ಯಕ್ತಿಯನ್ನು ಸೂಚಿಸುತ್ತದೆ. ಆದರೆ ಬಿಜೆಪಿಯ ಪ್ರತಿಸ್ಪರ್ಧಿಗಳು ತಮ್ಮ ಸಾಮಾಜಿಕ ನ್ಯಾಯದ ಬಿತ್ತಿಪತ್ರಗಳನ್ನು ದುರ್ಬಲಗೊಳಿಸಲು ಧರ್ಮವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಲು ಕಮಂಡಲವನ್ನು ಬಳಿಸಿದ್ದಾರೆ ಎಂದು ಹೇಳಿದ್ದಾರೆ.

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲೂ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಸಂಕ್ಷಿಪ್ತ ಭಾಷಣ ಮಾಡಿದರು. ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular