Saturday, October 19, 2024
Google search engine
Homeಮುಖಪುಟಭಾರತ ಜೋಡೋ ಯಾತ್ರೆಯಿಂದ ಕಂಗೆಟ್ಟಿದೆ ಬಿಜೆಪಿ - ರಣದೀಪ್ ಸಿಂಗ್ ಸುರ್ಜೇವಾಲಾ

ಭಾರತ ಜೋಡೋ ಯಾತ್ರೆಯಿಂದ ಕಂಗೆಟ್ಟಿದೆ ಬಿಜೆಪಿ – ರಣದೀಪ್ ಸಿಂಗ್ ಸುರ್ಜೇವಾಲಾ

ದೇಶದಲ್ಲಿ ಉಂಟಾಗಿರುವ ಅಜಾಗರಕತೆಯ ವಿರುದ್ಧ ಕಾಂಗ್ರೆಸ್ ಪಕ್ಷ ಶ್ರೀಯುತ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕೈಗೊಂಡಿರುವ ಭಾರತ ಐಕ್ಯತಾ ಯಾತ್ರೆಯು ಅತ್ಯಂತ ಯಶಸ್ಸು ಕಾಣುತ್ತಿದೆ. ಎಲ್ಲಡೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಇದನ್ನು ನೋಡಿ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿಮಾನ ಹಾಗೂ ಹೆಲಿಕಾಪ್ಟರ್ ಯಾತ್ರೆಯನ್ನು ಆರಂಭಿಸಿದ್ದಾರೆ ಎಂದು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ವ್ಯಂಗ್ಯವಾಡಿದ್ದಾರೆ.

ಇದರ ನಡುವೆ ರಾಜ್ಯದ ಜನರು ಬಿಜೆಪಿ ರ‍್ಕಾರಕ್ಕೆ 10 ಪ್ರಮುಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವುಗಳಿಗೆ ಉತ್ತರ ಕೊಡಲು ಬಿಜೆಪಿ ಪಕ್ಷದ ನಾಯಕರಿಗೆ ನೈತಿಕತೆ ಹಾಗೂ ಸ್ಥರ‍್ಯ ಇಲ್ಲ ಅನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಶ್ನೆ -1
ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಅಧಿಕಾರದಿಂದ ಕೆಳಗಿಸಲಾಯಿತೇ.. ಈ ಪ್ರಶ್ನೆಗೆ ಇವರು ಉತ್ತರ ಕೊಡಬೇಕಿದೆ. ಹಾಗೇ ಸದ್ಯ ಲೋಕಾಯುಕ್ತರು ಅವರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಿದ್ದಾರೆಯೇ.. ಈ ಪ್ರಶ್ನೆಗೆ ಉತ್ತರ ಕೊಡಿ

ಪ್ರಶ್ನೆ -2
ರಾಜ್ಯ ಬಿಜೆಪಿ ಸರ್ಕಾರ ಇಡೀ ದೇಶದಲ್ಲೇ 40% ಸರ್ಕಾರ ಅನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಈ ಮಾತು ಸುಳ್ಳೇ? ಇದನ್ನು ನಿಮ್ಮ ಸರ್ಕಾರರದ ಕಮಿಷನ್ ದಂಧೆಯನ್ನು ನೋಡಿಯೇ ಹೇಳುತ್ತಿರುವುದಲ್ಲವೇ?

ಪ್ರಶ್ನೆ -3 ರಾಜ್ಯದ ಪ್ರತಿಯೊಬ್ಬರ ಬಾಯಲ್ಲೂ ಪೇ-ಸಿಎಂ ಅನ್ನುವ ಗುಸು-ಗುಸು ವಾಕ್ಯ ಕೇಳಿ ಬರುತ್ತಲ್ಲವೇ? ಇದನ್ನು ಯಾರೂ ಸುಮ್ಮನೆ ಹೇಳುತ್ತಿಲ್ಲ. ಬಿಜೆಪಿ ಸರ‍್ಕಾರದ ಭ್ರಷ್ಟಾಚಾರವನ್ನು ನೋಡಿಯೇ ಹೇಳುತ್ತಾ ಇರುವುದು ಅನ್ನುವ ಮಾತು ಸುಳ್ಳಲ್ಲ ತಾನೇ?

ಪ್ರಶ್ನೆ -4: ರಾಜ್ಯ ಗುತ್ತಿಗೆದಾರರ ಸಂಘ ನಿಮ್ಮ ಸರ್ಕಾರ ವಿರುದ್ಧ ೪೦% ಕಮಿಷನ್ ಆರೋಪ ಹೊರಿಸಿದೆ. ಇದಾಗಿ ಇನ್ನೇನು ಒಂದು ವರ್ಷವೇ ಕಳೆಯುತ್ತಿದೆ. ಕೇವಲ ಅವರಿಂದ ದಾಖಲೆ ಕೇಳುವ ನೀವು, ಇದರ ಬದಲಾಗಿ ಯಾಕೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದೀರಿ?

ಪ್ರಶ್ನೆ -5 ಇನ್ನು 13 ಸಾವಿರ ಖಾಸಗಿ ಶಾಲೆಗಳ ಸಂಘಗಳ ಒಕ್ಕೂಟ ರ‍್ಕಾರ 40% ಕಮಿಷನ್ ಕೇಳುತ್ತಿದೆ ಅಂತ ಆರೋಪಿಸಿದೆ. ಹೀಗಿದ್ದರೂ ನಿಮ್ಮ ಸರ್ಕಾರವೇಕೆ ಖಾಸಗಿ ಶಾಲೆಗಳ ಒಕ್ಕೂಟದ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಾಗಿದ್ದರೆ, ಅವರು ಮಾಡುತ್ತಿರುವ ಆರೋಪ ನಿಜವೇ?

ಪ್ರಶ್ನೆ -6: ರಾಜ್ಯದ ಇತಿಹಾಸದಲ್ಲೇ ಮೊದಲು ಅನ್ನುವಂತೆ ಹಲವು ಪ್ರಮುಖ ಮಠಗಳ ಮಠಾಧಿಪತಿಗಳು ಕೂಡಾ ನಿಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ. ಇದು ಯಾಕೆ?

ಪ್ರಶ್ನೆ -7: ಕಾಮಗಾರಿ ಬಿಲ್ ಪಾವತಿಗಾಗಿ 40% ಕಮಿಷನ್ ಕೊಡಲಾಗದೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಆದರೆ ಇವರ ಸಾವಿಗೆ ಪರೋಕ್ಷವಾಗಿ ಕಾರಣರಾದವರಿಗೆ ಕ್ಲೀನ್ ಚಿಟ್ ನೀಡಿದ್ದಾದರೂ ಯಾಕೆ?

ಪ್ರಶ್ನೆ -8: ಮತ್ತೊಂದು ಪ್ರಮುಖವಾದ ಪ್ರಶ್ನೆ ಎಂದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ತುಂಬಾ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ ಏಕೆ? ಇದಕ್ಕೆ ನಿಮ್ಮ ಬಳಿ ಸ್ಪಷ್ಟ ಉತ್ತರ ಇದೆಯೇ?

ಪ್ರಶ್ನೆ-9: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯೇ 2500 ಕೋಟಿಗೆ ಮಾರಾಟಕ್ಕಿದೆ ಎಂದು ನಿಮ್ಮ ಶಾಸಕರೇ ಹೇಳುತ್ತಿದ್ದಾರೆ.. ಇದು ಸುಳ್ಳೇ..?

ಪ್ರಶ್ನೆ-10: ರಾಜ್ಯದಲ್ಲಿ ಸರ್ಕಾರದ ಆಡಳಿತ ಯಂತ್ರ ಕೆಟ್ಟು ಕೂತಿದೆ. ಮುಖ್ಯಮಂತ್ರಿ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಅಂತ ನಿಮ್ಮದೇ ಸಚಿವರು ಆರೋಪ ಮಾಡುತ್ತಿದ್ದಾರಾಲ್ಲ..? ಎಂದು ಪ್ರಶ್ನೆಗಳನ್ನು ರಣದೀಪ್ ಸುರ್ಜೇವಾಲ್ ಕೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular