ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರು ಪ್ರತಿಪಾದಿಸಿದ ವೈಯಕ್ತಿಕ ಸ್ಮರಣೆಯ ಬೇರುಗಳು, ವಿಘಟನೆಗಳು ಮತ್ತು ಸಾಮೂಹಿಕ ನಿರ್ಬಂಧಗಳನ್ನು ಬಹಿರಂಗಪಡಿಸುವ ಧೈರ್ಯ ಮತ್ತು ಕ್ಲಿನಿಕಲ್ ತೀಕ್ಷ್ಣತೆಗಾಗಿ ಈ ವರ್ಷದ ಸೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ಎಂಬತ್ತೆರಡು ವರ್ಷದ ಎರ್ನಾಕ್ಸ್ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ತುಂಬಾ ಚಿಕ್ಕದಾಗಿವೆ. ಎರ್ನಾಕ್ಸ್ ಜೀವನದಲ್ಲಿ ನಡೆದ ಘಟನೆಗಳು ಮತ್ತು ಅವರ ಸುತ್ತಮುತ್ತಲ ಜೀವನ, ಲೈಂಗಿಕ ಮುಖಾಮುಖಿಗಳು, ಗರ್ಭಪಾತ, ಅನಾರೋಗ್ಯ ಮತ್ತು ಆಕೆಯ ಪೋಷಕರ ಸಾವಿನ ರಾಜಿಯಾಗದ ಭಾವಚಿತ್ರಗಳನ್ನು ಪ್ರಸ್ತುತಪಡಿಸಿದ್ದಾರೆ.
ಎರ್ನಾಕ್ಸ್ ಸರಳವಾದ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯೊಂದಿಗೆ ರಾಜಿಯಾಗದೆ ಸಾಹಿತ್ಯ ಬರೆದಿದ್ದಾರೆ. ಹೀಗಾಗಿ ಪ್ರಶಂಸನೀಯ ಮತ್ತು ಸಹಿಷ್ಣುತೆಯನ್ನು ಸಾಧಿಸಿದ್ದಾರೆ ಎಂದು ನೊಬೆಲ್ ಸಮಿತಿ ಅಧ್ಯಕ್ಷ ಆಂಡರ್ಸ್ ಓಲ್ಸನ್ ಹೇಳಿದ್ದಾರೆ.
ಎರ್ನಾಕ್ಸ್ ತನ್ನದೇ ಅದ ಶೈಲಿಯಲ್ಲಿ ಬರೆದಿದ್ದು ವಸ್ತುನಿಷ್ಠ ನೋಟ, ಪ್ಲೋರಿಡ್ ವಿವರಣೆ ಅಥವಾ ಆಗಾಧ ಭಾವನೆಗಳಿಂದ ಕೂಡಿವೆ. ತಂದೆಯ ಸಂಬಂಧದೊಂದಿಗಿನ ಸಂಬಂಧದ ಬಗ್ಗೆ ಲಾ ಫ್ಲೇಸ್ (ಎ ಮ್ಯಾನ್ಸ್ ಪ್ಲೇಸ್) ಬರೆದಿದ್ದಾರೆ. ಯಾವುದೇ ಸಾಹಿತ್ಯದ ನೆನಪುಗಳಿಲ್ಲ. ವ್ಯಂಗ್ಯದ ವಿಜಯೋತ್ಸವದ ಪ್ರದರ್ಶನವಿಲ್ಲ. ತಟಸ್ಥ ಬರವಣಿಗೆಯ ಶೈಲಿಯು ನನಗೆ ಸ್ವಾಭಾವಿಕವಾಗಿ ಬಂದಿದೆ ಎಂದು ಅನ್ನಿ ತಿಳಿಸಿದ್ದಾರೆ.
ಆಕೆಯ ಮೆಚ್ಚುಗೆ ಪಡೆದ ಪುಸ್ತಕ ದಿ ಇಯರ್ಸ್ 2008ರಲ್ಲಿ ಪ್ರಕಟವಾಯಿತು ಮತ್ತು 2ನೇ ಪ್ರಪಂಚ ಯುದ್ದದ ಅಂತ್ಯದಿಂದ ಇಂದಿನವರೆಗೆ ತನ್ನನ್ನು ಮತ್ತು ವಿಶಾಲವಾದ ಫ್ರೆಂಚ್ ಸಮಾಜವನ್ನು ವಿವರಿಸುತ್ತದೆ. ಹಿಂದಿನ ಪುಸ್ತಕಗಳಿಗಿಂತ ಭಿನ್ನವಾಗಿ ದಿ ಇಯರ್ಸ್ ನಲ್ಲಿ ಎರ್ನಾಕ್ಸ್ ತನ್ನ ಪಾತ್ರವನ್ನು ನಾನು ಎಂದು ಕರೆಯುವ ಬದಲು ಅವಳು ಎಂದು ಕರೆದು ಮೂರನೇ ವ್ಯಕ್ತಿಯಲ್ಲಿ ತನ್ನ ಬಗ್ಗೆ ಬರೆದಿದ್ದಾರೆ. ಹೀಗಾಗಿ ಈ ಪುಸ್ತಕವು ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದೆ.