Monday, September 16, 2024
Google search engine
Homeಮುಖಪುಟಮಾಜಿ ಪೊಲೀಸ್ ಅಧಿಕಾರಿಯಿಂದ ಗುಂಡಿನ ದಾಳಿ - 35ಕ್ಕೂ ಹೆಚ್ಚು ಮಂದಿ ಹತ್ಯೆ

ಮಾಜಿ ಪೊಲೀಸ್ ಅಧಿಕಾರಿಯಿಂದ ಗುಂಡಿನ ದಾಳಿ – 35ಕ್ಕೂ ಹೆಚ್ಚು ಮಂದಿ ಹತ್ಯೆ

ಥೈಲ್ಯಾಂಡ್ ನ ಬಾಯುವ್ಯದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 23 ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.

ಈಶಾನ್ಯ ಥೈಲ್ಯಾಂಡ್ ನ ನರ್ಸರಿಯೊಂದಕ್ಕೆ ಬಂದೂಕು ಮತ್ತು ಚಾಕು ಹಿಡಿದು ಬಂದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ದಾಳಿ ಮಾಡಿ 30 ಜನರನ್ನು ಗುಂಡಿಕ್ಕಿ ಕೊಂದುಹಾಕಿದ್ದಾರೆ ಎಂದು ಹೇಳಿದ್ದಾರೆ.

ದಾಳಿಕೋರ ಶಿಶುಪಾಲನಾ ಕೇಂದ್ರಕ್ಕೆ ನುಗ್ಗಿ ಶಾಟ್ ಗನ್, ಪಿಸ್ತೂಲ್ ಮತ್ತು ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗುಂಡು ಹಾರಾಟದ ಘಟನೆಯಿಂದ ಸತ್ತವರ ಸಂಖ್ಯೆ 30ಕ್ಕೆ ಏರಿದೆ ಎಂದು ಥಾಯ್ ಪ್ರಧಾನಿ ಕಚೇರಿಯ ವಕ್ತಾರ ಅನುಚಾ ಬುರಪಚೈಸ್ರಿ ಹೇಳಿದ್ದಾರೆ.

ದಾಳಿ ನಡೆದ ಪ್ರಾಂತ್ಯದ ಪೊಲೀಸ್ ಕರ್ನಲ್ ಜಕ್ಕಪತ್ ವಿಜಿತ್ರೈತಯ ಬಂಧೂಕುದಾರಿಯನ್ನು ಪನ್ಯಾ ಖಮ್ರಾಬ್ ಎಂದು ಗುರುತಿಸಿದ್ದಾರೆ.

ನಾಂಗ್ ಬುವಾ ಲಾಮ್ ಫು ಪ್ರಾಂತ್ಯದ ಪೊಲೀಸ್ ಕರ್ನಲ್ ಜಕ್ಕಪತ್ ವಿಜಿತ್ರೈತಾಯ ಅವರು ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಧಾರಿ ಮನೆಗೆ ಹೋಗಿ ತನ್ನ ಹೆಂಡತಿ ಮತ್ತು ಮಗುವನ್ನು ಕೊಂದಿದ್ದಾನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular