Thursday, September 19, 2024
Google search engine
Homeಮುಖಪುಟಟಿಆರ್.ಎಸ್ ಈಗ ಭಾರತ ರಾಷ್ಟ್ರ ಸಮಿತಿ (ಬಿಆರ್.ಎಸ್)

ಟಿಆರ್.ಎಸ್ ಈಗ ಭಾರತ ರಾಷ್ಟ್ರ ಸಮಿತಿ (ಬಿಆರ್.ಎಸ್)

ತೆಲಂಗಾಣ ರಾಷ್ಟ್ರ ಸಮಿತಿ ಈಗ ಭಾರತ ರಾಷ್ಟ್ರ ಸಮಿತಿ ಆಗಿದೆ. ಇದು ಅದರ ಸಂಸ್ಥಾಪಕ ಮತ್ತು ಟಿಆರ್.ಎಸ್. ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಈ ಘೋಷಣೆ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರಾವ್ ಅವರು ಬುಧವಾರ ಹೈದರಾಬಾದ್ ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಟಿಆರ್.ಎಸ್ ರಾಜ್ಯ ಮಹಾಮಂಡಲದ ಸಭೆ ನಡೆಸಿದರು. ಸಭೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ 20 ಶಾಸಕರು ಮತ್ತು ತಮಿಳುನಾಡು ಮೂಲದ ವಿದುತಲೈ ಚಿರುತೈಗಲ್ ಕಚ್ಚಿಯ ದಲಿತ ಮುಖಂಡ ಟಿ.ತಿರುಮಾವಳವನ್ ಕೂಡ ಹಾಜರಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಏಪ್ರಿಲ್ 2001ರಲ್ಲಿ ಪ್ರಾರಂಭವಾದ ಟಿಆರ್.ಎಸ್ ಸದಸ್ಯರು ಅದರ ಹೆಸರನ್ನು ಬದಲಾಯಿಸಲು ಮತ್ತು ರಾಷ್ಟ್ರೀಯ ಪಕ್ಷವನ್ನಾಗಿ ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಹಾಗಾಗಿ ಚುನಾವಣೆ ಆಯೋಗವನ್ನು ಸಂಪರ್ಕಿಸಿ ರಾಷ್ಟ್ರೀಯ ಪಕ್ಷವಾಗಿ ಹೆಸರು ಬದಲಾವಣೆ ಹಾಗೂ ನೋಂದಣಿ ಕೋರಿ ಅರ್ಜಿ ಸಲ್ಲಿಸಲಿದೆ.

ಕರ್ನಾಟಕದಲ್ಲಿ ಬಿಆರ್.ಎಸ್ ಮತ್ತು ಜೆಡಿಎಸ್ ಜಂಟಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯೇತರ, ಕಾಂಗ್ರೆಸೇತರ ಮೈತ್ರಿಕೂಟವನ್ನು ರಚಿಸುವ ಪ್ರಯತ್ನದಲ್ಲಿ ಕೆಸಿಆರ್ ಇತ್ತೀಚೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಶಿಬು ಸೊರೆನ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಶಿವಸೇನಾ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ಪ್ರತಿಪಕ್ಷಗಳನ್ನು ಭೇಟಿ ಮಾಡಿದ್ದರು.

ಮಹಾರಾಷ್ಟ್ರದ ಮಾಜಿ ಸಿಎಂ ಉದ್ದವ್ ಠಾಕ್ರೆ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಗುಜರಾತ್ ಸಿಎಂ ಶಂಕರ್ ಸಿಂಹ ವಘೇಲಾ ಅವರನ್ನು ಭೇಟಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular