Monday, September 16, 2024
Google search engine
Homeಮುಖಪುಟಮಹಾತ್ಮಗಾಂಧಿ ಮತ್ತು ಅಹಿಂಸೆ

ಮಹಾತ್ಮಗಾಂಧಿ ಮತ್ತು ಅಹಿಂಸೆ

ಇಂದು ನಮ್ಮ ದೇಶದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ನಮ್ಮ ದೇಶದ ಹೊರತಾಗಿ ಜಗತ್ತಿನಾದ್ಯಂತ ಇಂದಿನ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.ಇದನ್ನು ಯಾರೋ ಭಾರತೀಯ ಗಾಂಧಿ ಅನುಯಾಯಿಗಳೋ, ಕಾಂಗ್ರೆಸಿಗರೋ ಮಾಡಿಸುತ್ತಿರುವುದಲ್ಲ. ವಿಶ್ವ ಸಂಸ್ಥೆಯೇ ಈ ಅಹಿಂಸಾ ದಿನಾಚರಣೆಯ ರೂವಾರಿ. ವಿಶ್ವ ಸಂಸ್ಥೆಯ ಇತಿಹಾಸದಲ್ಲಿ ಯಾರದೇ ಹುಟ್ಟುಹಬ್ಬವನ್ನು ವಿಶ್ವಸಂಸ್ಥೆ ಅಧಿಕೃತವಾಗಿ ಆಚರಿಸಿದ್ದಿಲ್ಲ. ವಿಶ್ವ ಸಂಸ್ಥೆ ಅಧಿಕೃತವಾಗಿ ಆಚರಿಸುತ್ತಿರುವುದು ಜಗತ್ತಿನ ಏಕೈಕ ನಾಯಕನ ಜನ್ಮದಿನವನ್ನು ಮಾತ್ರ.ಇಂತಹ ಗಾಂಧಿಯ ಬಗ್ಗೆ ಗಾಂಧಿಯ ನಾಡಿನಲ್ಲೇ ತುಚ್ಚವಾಗಿ ಮಾತನಾಡಲಾಗುತ್ತಿರುವವರ ಮೆದುಳು ಅದೆಷ್ಟು ನಂಜಿನಿಂದ ತುಂಬಿರಬಹುದೆಂದು ಊಹಿಸಿ..

ಜಗತ್ತಿನ ಸುಮಾರು ನೂರಕ್ಕೂ ಹೆಚ್ಚಿನ ದೇಶಗಳು ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಗೌರವಾರ್ಥ ಅಂಚೆ ಚೀಟಿಯನ್ನು ತಯಾರಿಸಿದೆ.ಜಾಗತಿಕ ಇತಿಹಾಸದಲ್ಲಿ ಇಂತಹ ಗೌರವವನ್ನು ಪಡೆದ ಇನ್ನೊಬ್ಬ ವ್ಯಕ್ತಿ ಈ ವರೆಗೆ ಆಗಿ ಹೋಗಿಲ್ಲ. ಗಾಂಧೀಜಿಯವರ ಹೆಸರಲ್ಲಿ ಮೊಟ್ಟ ಮೊದಲು ಅಂಚೆ ಚೀಟಿ ಬಿಡುಗಡೆಗೊಂಡಿದ್ದು ಭಾರತದಲ್ಲಲ್ಲ. ಯುರೋಪಿನ ಪೋಲಂಡ್‌ನಲ್ಲಿ.

ಗಾಂಧೀಜಿಯ ಭಾವಚಿತ್ರವಿರುವ ನಾಣ್ಯಗಳನ್ನು ಜಗತ್ತಿನ ನಲ್ವತ್ತು ದೇಶಗಳು ಬಿಡುಗಡೆಗೊಳಿಸಿವೆ. ಇಂತಹ ಗೌರವ ಪಡೆದ ಇನ್ನೊಬ್ಬ ವ್ಯಕ್ತಿ ಜಾಗತಿಕ ಇತಿಹಾಸದಲ್ಲಿಲ್ಲ.

ಗಾಂಧೀಜಿ ನಮ್ಮ ದೇಶದ ವಿಮೋಚನೆಗಾಗಿ ಯಾವ ಇಂಗ್ಲೆಂಡ್ ವಿರುದ್ಧ ರಾಜಿರಹಿತ ಹೋರಾಟ ಮಾಡಿದ್ದರೋ ಅದೇ ಇಂಗ್ಲೆಂಡಿನ ಪಾರ್ಲಿಮೆಂಟ್ ಮುಂದೆ ಗಾಂಧೀಜಿಯವರ ಪ್ರತಿಮೆಯಿದೆ.

ನಮ್ಮ ದೇಶದಲ್ಲಿ ಎಂ.ಜಿ.ರೋಡ್ ಎಂದು ಅಲ್ಲಲ್ಲಿ ಇದೆಯಲ್ವಾ.. ಇಂತಹ ಎಂ.ಜಿ.ರೋಡ್ ಮಹಾತ್ಮಾ ಗಾಂಧಿ ರಸ್ತೆ ಜಗತ್ತಿನ ನಲ್ವತ್ತು ದೇಶಗಳಲ್ಲಿವೆ ಎಂದರೆ ನೀವು ನಂಬಲೇಬೇಕು.

ನಮ್ಮಲ್ಲಿ ನಮ್ಮ ರಾಷ್ಟ್ರಪಿತ ಗಾಂಧೀಜಿಯನ್ನು ಕುಬ್ಜಗೊಳಿಸಲಿಕ್ಕೆಂದೇ ಆಳುವ ವರ್ಗ ಪ್ರತಿನಿತ್ಯ ಒಂದಲ್ಲ ಒಂದು ವಿಧದಲ್ಲಿ ಶ್ರಮಿಸುತ್ತಲೇ ಇದೆ. ಗಾಂಧೀಜಿಯವರ ಪ್ರತಿಮೆಗೆ ಅವಮಾನ ಮಾಡಲಾಗುತ್ತಿದೆ.ಗಾಂಧಿ ಹಂತಕ ಭಯೋತ್ಪಾದಕ ಗೋಡ್ಸೆಯನ್ನು ಪೂಜಿಸಲಾಗುತ್ತಿದೆ. ಗಾಂಧಿ ಕೊಲೆಯ ಮರು ನಿರೂಪಣೆ ಮಾಡಿ ಸಂಭ್ರಮಿಸಲಾಗುತ್ತಿದೆ. ಗಾಂಧಿಗಿಂತ ಸರ್ದಾರ್ ಪಟೇಲರು ಮೇಲೆಂದು ತೋರಿಸಲು ಜಗತ್ತುನ ಅತೀ ಎತ್ತರದ ಪ್ರತಿಮೆಯೆಂಬ ಹೆಗ್ಗಳಿಕೆಗಾಗಿ ಸರ್ದಾರ್ ಪಟೇಲರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಗಾಂಧಿಯನ್ನು ಅವಮಾನಿಸುವವರು ತಿಳಿದುಕೊಳ್ಳಿ “ಜಗತ್ತಿನ ಎಂಬತ್ತು ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ.

ಗಾಂಧೀಜಿಯವರ ಹೆಸರು ಒಟ್ಟು ಆರು ಬಾರಿ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ ಗಾಂಧೀಜಿಗೆ ನೊಬೆಲ್ ಪ್ರಶಸ್ತಿ ಒಲಿಯಲೇ ಇಲ್ಲ. ಕೊನೆಗೆ ನೊಬೆಲ್ ಸಮಿತಿಯೇ ಅಧಿಕೃತವಾಗಿ ” ಗಾಂಧಿಯ ವ್ಯಕ್ತಿತ್ವ ನೊಬೆಲ್‌ಗಿಂತ ದೊಡ್ಡದು. ಅವರಿಗೆ ನೊಬೆಲ್ ಕೊಟ್ಟು ಅವರನ್ನು ಸೀಮಿತಗೊಳಿಸಲಾಗದು” ಎಂದು ಹೇಳಿಕೆ ಕೊಟ್ಟಿತು.

ಅಮೆರಿಕಾದ Times Magazine ಈ ವರೆಗೆ ಗಾಂಧಿಯಲ್ಲದ ಇನ್ನೊಬ್ಬ ಭಾರತೀಯನನ್ನು ವರ್ಷದ ವ್ಯಕ್ತಿಯೆಂದು ಘೋಷಿಸಿಲ್ಲ. 1930ರಲ್ಲಿ Times Magazine ಇಂತಹ ಘೋಷಣೆ ಮಾಡಿ ತನ್ನ ಮುಖಪುಟದಲ್ಲಿ ಗಾಂಧೀಜಿಯವರ ಭಾವಚಿತ್ರ ಅಚ್ಚು ಮಾಡಿತ್ತು.

ಗಾಂಧಿಯೆಂದರೆ ಗಾಂಧಿ. ಅವರಿಗೆ ಅವರಲ್ಲದ ಹೋಲಿಕೆಯಿಲ್ಲ.ಗಾಂಧಿಯನ್ನು ನೀವೆಷ್ಟೇ ಕುಗ್ಗಿಸಯತ್ನಿಸಿದರೂ ಅದು ಕುಗ್ಗುವ ವ್ಯಕ್ತಿತ್ವಲ್ಲ. ಗೋಡ್ಸೆಯ ಆರಾಧಕರ ಗಮನಕ್ಕೆ ” ಗಾಂಧೀಜಿ ನಮ್ಮ ರಾಷ್ಟ್ರಪಿತ,ಗಾಂಧಿ ಮನುಕುಲದ ಅಭಿಮಾನ”

-ಇಸ್ಮತ್ ಪಜೀರ್, ಲೇಖಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular