ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಎಂ.ಮಲ್ಲಿಕಾರ್ಜು ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿರಿಯ ಮುಖಂಡರಾದ ದಿಗ್ವಿಜಯ ಸಿಂಗ್, ಪ್ರಮೋದ್ ತಿವಾರಿ, ಪಿ.ಎಲ್.ಪುನಿಯಾ, ಎ.ಕೆ.ಆಂಟನಿ, ಪವನ್ ಕುಮಾರ್ ಬನ್ಸಲ್, ಮುಕುಲ್ ವಾಸ್ನಿಕ್ ಪ್ರತಿಪಾದಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಹೊರಬೀಳಲಿದೆ.
ಸಂಸದ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ತಂದೆ ಗುಲ್ಬರ್ಗಾದಲ್ಲಿ ಗಿರಣಿ ಕಾರ್ಮಿಕರಾಗಿದ್ದರು. ಉದ್ಯೋಗ ಅರಸಿ ಬೀದರ್ ನಿಂದ ನಗರಕ್ಕೆ ವಲಸೆ ಬಂದಿದ್ದರು. ಕಳೆದ 50 ವರ್ಷಗಳಲ್ಲಿ ಅವರು ಹಲವು ಉನ್ನತ ಹುದ್ದೆಗಳನ್ನು ಏರಿದ್ದಾರೆ.