Monday, December 23, 2024
Google search engine
Homeಮುಖಪುಟಮೋದಿ ಆಡಳಿತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಳ - ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಮೋದಿ ಆಡಳಿತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಳ – ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಭಾರತ ಜೋಡೋ ಯಾತ್ರೆಯ 23ನೇ ದಿನ. ಈ ಯಾತ್ರೆ ತಮಿಳುನಾಡಿನಲ್ಲಿ 62 ಕಿ.ಮೀ, ಕೇರಳದಲ್ಲಿ 355 ಕಿ.ಮೀ ಕ್ರಮಿಸಿ ಈಗ ಕರ್ನಾಟಕ ರಾಜ್ಯದಲ್ಲಿ ಮುಂದಿನ 21 ದಿನಗಳ ಕಾಲ 511 ಕಿ.ಮೀ ಕ್ರಮಿಸಲು ಪಾದಯಾತ್ರೆ ಆರಂಭವಾಗಿದೆ ಎಂದು ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ

ಈ ಯಾತ್ರೆ ಮಾಡಲು ಪ್ರಮುಖ ಕಾರಣ ಎಂದರೆ, ಮೋದಿ ಅವರ ನಾಯಕತ್ವದಲ್ಲಿ ಅವರ ಸಿದ್ಧಾಂತ, ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಬೆಲೆ ಏರಿಕೆ, ಆರ್ಥಕ ಅಸಮಾನತೆ, ಜಿಎಸ್ಟಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇನ್ನು ಮೋದಿ ಅವರ ನಾಯಕತ್ವದಲ್ಲಿ ಸಾಮಾಜಿಕ ಧೃವೀಕರಣ ಹೆಚ್ಚುತ್ತಿದ್ದು, ಜಾತಿ, ಧರ್ಮ, ಭಾಷೆ, ಆಹಾರ, ಉಡುಗೆ ವಿಚಾರದಲ್ಲಿ ಸಮಾಜ ಒಡೆಯಲಾಗುತ್ತಿದೆ ಎಂದರು.

ಕೇವಲ ಚುನಾವಣೆ ಗೆಲ್ಲಲು ಇವುಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಕರ್ನಾಟಕ ತಾಜಾ ಉದಾಹರಣೆ. ಇನ್ನು ಮೋದಿ ಆಡಳಿತದಲ್ಲಿ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದ್ದು, ಸಂವಿಧಾನ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಸಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡಿದ್ದು, ಎಲ್ಲ ಆಡಳಿತ ಶಕ್ತಿಕೇಂದ್ರಗಳ ಓರ್ವ ವ್ಯಕ್ತಿ ನಿಯಂತ್ರಣದಲ್ಲಿದೆ. ಅವರು ಸರ್ವಜ್ಞಾನಿ, ಸ್ವರ್ವವ್ಯಾಪಿ, ಸರ್ವಶಕ್ತಿಮಾನವನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಗಳ ಅಧಿಕಾರ ಕಸಿಯಲಾಗಿದೆ. ರಾಜ್ಯಗಳು ಬೇಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ನೆರವು ಕೇವಲ ಪ್ರಧಾನಿಯ ಪ್ರಚಾರಕ್ಕಾಗಿ ಇದೆ. ಇದರಲ್ಲಿ ಪ್ರಧಾನಮಂತ್ರಿಗಳ ಭಾವಚಿತ್ರಇಲ್ಲವಾದರೆ ವಿತ್ತ ಸಚಿವರಿಗೆ ಕೋಪ ಬರುತ್ತದೆ. ಕಾಂಗ್ರೆಸ್ ಪಕ್ಷ ಭಾರತ ಜೋಡಿಸಿದರೆ, ಭಾರತವನ್ನು ಒಡೆಯುತ್ತಿರುವವರು ಮೋದಿ ಅವರ ಸಿದ್ಧಾಂತ, ಆಡಳಿತ. ಈ ಕಾರಣಗಳಿಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆ ನಡೆಯುತ್ತಿದೆ. 12 ರಾಜ್ಯಗಳಲ್ಲಿ ಈ ಯಾತ್ರೆ ಸಾಗಲಿದ್ದು, ಹಲವು ರಾಜ್ಯಗಳಲ್ಲಿ ಈ ಯಾತ್ರೆ ಸಾಗದ ಕಾರಣ ಯಾತ್ರೆ ಸಾಗದ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಭಾರತ ಜೋಡೋ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಭಾರತ ಜೋಡೋ ಯಾತ್ರೆ ಬಿಜೆಪಿ ಚಿತ್ತಗೆಡಿಸಿದ್ದು, ಬಿಜೆಪಿ ಸುಳ್ಳು ಸುದ್ದಿಗಳ ಮೂಲಕ ಈ ಯಾತ್ರೆಯನ್ನು ಟೀಕಿಸುತ್ತಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಚಿಂತೆಗೀಡು ಮಾಡಿದೆ. ಈ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅವರಿಗೆ ಮನದಟ್ಟಾಗಿದೆ.

ಭಾರತ ಜೋಡೋ ಯಾತ್ರೆ ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಾಗಿದ್ದು, ಇದು ಬ್ಲಾಕ್, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿದೆ. ಈ ಯಾತ್ರೆ ಮೂಲಕ ಒಂದು ದೃಷ್ಟಿಕೋನ ನೀಡುತ್ತಿದ್ದು, ಇದು ಕಾಂಗ್ರೆಸ್ ಪಾಲಿಗೆ ಶಕ್ತಿಯಾಗಿದೆ. ಬೇರೆ ರಾಜ್ಯಗಳಲ್ಲಿ ಆಗಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ. ಇದು ವಿಶ್ವದಲ್ಲೇ ರಾಜಕೀಯ ಪಕ್ಷದಿಂದ ಕೈಗೊಂಡಿರುವ ಅತ್ಯಂತ ದೊಡ್ಡ ಯಾತ್ರೆಯಾಗಿದೆ. ಇದು ದೇಶದ ರಾಜಕಾರಣದಲ್ಲಿ ಬದಲಾವಣೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular