ದೇಶದ ಎಂಟು ರಾಜ್ಯಗಳ ಪಿಎಫ್ಐ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ 100 ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ತುಮಕೂರಿನಲ್ಲೂ ದಾಳಿ ನಡೆದಿದ್ದು ಪಿಎಫ್ಐ ಜಿಲ್ಲಾಧ್ಯಕ್ಷರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಿಹಾನ್ ಖಾನ್ ಎಂದು ಗುರುತಿಸಲಾಗಿದೆ.
ಆರೋಪಿ ರಿಹಾನ್ ಖಾನ್ ತುಮಕೂರಿನ ಸದಾಶಿವನಗರದಲ್ಲಿ ನೆಲೆಸಿದ್ದು ಆತನನ್ನು ತಹಶೀಲ್ದಾರ್ ಮುಂದೆ ಹಾಜರುಪಡಿಸಿದ ನಂತರ ಅಕ್ಟೋಬರ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕರ್ನಾಟಕದ ರಾಜ್ಯದ ಶಿವಮೊಗ್ಗ, ಬೀದರ್, ಹುಬ್ಬಳ್ಳಿ, ಬಳ್ಳಾರಿ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ 50ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಐದು ಮಂದಿ, ಬಳ್ಳಾರಿಯಲ್ಲಿ 4 ಮಂದಿ, ಹುಬ್ಬಳ್ಳಿಯಲ್ಲಿ ಇಬ್ಬರು ಮತ್ತು ಕೋಲಾರದ ಜಿಲ್ಲೆಯಲ್ಲಿ ಆರು ಮಂದಿ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜೊತೆಗೆ ಬೀದರ್ ಜಿಲ್ಲಾಧ್ಯಕ್ಷ ಮತ್ತು ಕಲ್ಬುರ್ಗಿ ಮಾಧ್ಯಮ ಸಂಯೋಜಕನನ್ನು ಬಂಧಿಸಲಾಗಿದೆ ಮಾಧ್ಯಮಗಳು ವರದಿ ಮಾಡಿವೆ.