2024ರ ಲೋಕಸಭಾ ಚುನಾವಣೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಇತರ ನಾಯಕರು ಒಗ್ಗೋಡಿ ವಿರೋಧ ಪಕ್ಷವನ್ನು ರಚಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
‘ನಾನು, ನಿತೀಶ್ ಕುಮಾರ್, ಹೇಮಂತ್ ಸೊರೇನ್ ಮತ್ತು ಮತ್ತೆ ಹಲವರು 2024ರ ಚುನಾವಣೆಯಲ್ಲಿ ಒಗ್ಗೂಡುತ್ತೇವೆ. ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುತ್ತವೆ. ನಾವೆಲ್ಲ ಒಂದ ಕಡೆ, ಬಿಜೆಪಿ ಇನ್ನೊಂದು ಕಡೆ ಇರುತ್ತೇವೆ. ಬಿಜೆಪಿ 300 ಸೀಟುಗಳ ಅಹಂಕಾರವೇ ಅದರ ಶತ್ರುವಾಗುತ್ತದೆ. 2024ರಲ್ಲಿ ಖೇಲಾ ಹೋಬ್ ಇರುತ್ತದೆ ಎಂದು ತಿಳಿಸಿದ್ದಾರೆ.
ಕೊಲ್ಕತ್ತಾದಲ್ಲಿ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಿಜೆಪಿ ತನ್ನ ದುರಹಂಕಾರ ಮತ್ತು ಜನರ ಕೋಪದಿಂದ ಸೋಲನ್ನು ಕಾಣಲಿದೆ ಎಂದು ಹೇಳಿದ್ದಾರೆ.
ಕೇಸರಿ ಪಕ್ಷವು ಜಾರ್ಖಂಡ್ ನಲ್ಲಿ ಕುದುರೆ ವ್ಯಾಪಾ ನಡೆಸುತ್ತಿದೆ ಎಂದು ಹೇಳಿದ ಬ್ಯಾನರ್ಜಿ ‘ಇತ್ತೀಚೆಗೆ ಬಂಗಾಳ ಪೊಲೀಸರು ನಗದು ಹಣದೊಂದಿಗೆ ಜಾರ್ಖಂಡ್ ಶಾಸಕರ ಬಂಧನ ಹೇಮಂತ್ ಸೊರೇನ್ ಸರ್ಕಾರದ ಪತನವನ್ನು ತಡೆಯಿತು ಎಂದು ತಿಳಿಸಿದ್ದಾರೆ.
ಜುಲೈ 30ರಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪಂಚಲಾದಲ್ಲಿ ಅವರ ವಾಹನವನ್ಉ ಅಡ್ಡಗಟ್ಟಿದ ನಂತರ ಜಾರ್ಖಂಡ್ ನ ಮೂವರು ಕಾಂಗ್ರೆಸ್ ಶಾಸಕರನ್ನು ಬಂಧಿಸಲಾಯಿತು ಮತ್ತು ಕಾರಿನಲ್ಲಿ ಸುಮಾರು 49 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಈ ಹಣವನ್ನು ತಮ್ಮ ರಾಜ್ಯದಲ್ಲಿ ಆದಿವಾಸಿ ಹಬ್ಬಕ್ಕೆ ಸೀರೆ ಖರೀದಿಸಲು ಮೀಸಲಿಡಲಾಗಿದೆ ಎಂದು ಮಮತಾ ಹೇಳಿದ್ದಾರೆ.
ಜಾರ್ಖಂಡ್ ನಲ್ಲಿ ಜೆಎಂಎಂ ನೇತೃತ್ವದ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಶಾಸಕರಿಗೆ ತಲಾ 10 ಕೋಟಿ ಮತ್ತು ಸಚಿವ ಸ್ಥಾನ ನೀಡುವ ಮೂಲಕ ಹೇಮಂತ ಸೊರೆನ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.