ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್ ಸದಸ್ಯೆ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಆಗಿ ಜೆಡಿಎಸ್ ಸದಸ್ಯೆ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಯಶಸ್ವಿಯಾಗಿವೆ.
9ನೇ ವಾರ್ಡ್ ನ ಪ್ರಭಾವತಿ ಸುಧೀಶ್ವರ್ ಮತ್ತು 23 ನೇ ವಾರ್ಡ್ ನ ನರಸಿಂಹಮೂರ್ತಿ ಕ್ರಮವಾಗಿ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾದರು.
ಮಹಾನಗರ ಪಾಲಿಕೆಯಲ್ಲಿ ಒಟ್ಟು 35 ಸದಸ್ಯರಿದ್ದು, ಬಿಜೆಪಿ 12 ಮಂದಿ, ಕಾಂಗ್ರೆಸ್ 10 ಮಂದಿ, ಜೆಡಿಎಸ್ 10 ಮಂದಿ ಸದಸ್ಯರು, ಪಕ್ಷೇತರ ಸದಸ್ಯರು 3, ಶಾಸಕ 1 ಮತ್ತು ಸಂಸದರು 2, ವಿಧಾನ ಪರಿಷತ್ ಸದಸ್ಯರು 1 ಸೇರಿದಂತೆ 39 ಮತಗಳು ಇದ್ದವು.
ಆದರೂ ಸಹ ತುಮಕೂರಿನಲ್ಲಿ ಶಾಸಕರು ಮತ್ತು ಸಂಸದರು ಬಿಜೆಪಿಯವರೆ ಆಗಿದ್ದರೂ ಪಾಲಿಕೆ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.