ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ವಶಕ್ಕೆ ಪಡೆದಿದ್ದ ಶಂಕಿತ ಆರೋಪಿಯನ್ನು ಎನ್.ಐಎ ಬಿಡುಗಡೆ ಮಾಡಿದ್ದು ಆತಂಕ ನಿವಾರಣೆಯಾದಂತೆ ಆಗಿದೆ.
ಭಾನುವಾರ ಬೆಳಗ್ಗೆ ತುಮಕೂರಿನ ಮರಳೂರು ದಿಣ್ಣೆಯಲ್ಲಿ ವಾಸವಿದ್ದ ವಿದ್ಯಾರ್ಥಿ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.
ಶಂಕಿತ ಆರೋಪಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮಾಹಿತಿ ಸಂಗ್ರಹಿಸಿದ ನಂತರ ಬಿಡುಗಡೆಗೊಳಿಸಲಾಗಿದೆ.
ಎಚ್ಎಂಎಸ್ ಯುನಾನಿ ಕಾಲೇಜು ವಿದ್ಯಾರ್ಥಿಯನ್ನು ಭಾನುವಾರ ಸಂಜೆ 4ಗಂಟೆಗೆ ಬಿಡುಗಡೆಗೊಳಿಸಿದ್ದು ಕಾಲೇಜು ಆಡಳಿತ ಮಂಡಳಿ ಇದನ್ನು ದೃಢಪಡಿಸಿದೆ ಎಂದು ಮೂಲಗಳು ಹೇಳಿವೆ.
ಐಸಿಸ್ ಉಗ್ರರ ಜೊತೆ ನಂಟ ಆರೋಪ ತುಮಕೂರಿನಲ್ಲಿ ಆತಂಕವನ್ನು ಉಂಟು ಮಾಡಿತ್ತು. ಇದೀಗ ಬಿಡುಗಡೆಯಾಗಿರುವುದು ಆತಂಕ ನಿವಾರಣೆಯಾದಂತೆ ಆಗಿದೆ.