Sunday, December 22, 2024
Google search engine
Homeಮುಖಪುಟನ್ಯಾಯಾಲಯಗಳನ್ನು ಸಂಪರ್ಕಿಸುವುದು ಕೆಲವೇ ಮಂದಿ - ಸಿಜೆಐ ಎನ್.ವಿ.ರಮಣ

ನ್ಯಾಯಾಲಯಗಳನ್ನು ಸಂಪರ್ಕಿಸುವುದು ಕೆಲವೇ ಮಂದಿ – ಸಿಜೆಐ ಎನ್.ವಿ.ರಮಣ

ಜನಸಂಖ್ಯೆಯ ಕೆಲ ಶೇಕಡವಾರು ಜನರು ಮಾತ್ರ ನ್ಯಾಯಾಲಯಗಳನ್ನು ಸಂಪರ್ಕಿಸುತ್ತಾರೆ. ಆದರೆ ಹೆಚ್ಚಿನವರು ಮೌನವಾಗಿ, ಅರಿವು ಮತ್ತು ಅಗತ್ಯ ವಿಧಾನಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸಭೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನವು ಉತ್ತಮ ಶಕ್ತಿಯಾಗಿ ಹೊರಹೊಮ್ಮಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ವಿತರಣೆಯ ವೇಗವನ್ನು ಹೆಚ್ಚಿಸಲು ಆಧುನಿಕ ತಾಂತ್ರಿಕ ಸಾಧನಗಳನ್ನು ಬಳಸಬೇಕು ಎಂದು ಹೇಳಿದರು.

ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಅದು ನಮ್ಮ ಪೀಠಿಕೆಯು ಪ್ರತಿಯೊಬ್ಬ ಭಾರತೀಯನಿಗೆ ನ್ಯಾಯದ ದೃಷ್ಟಿಕೋನವಾಗಿದೆ ವಾಸ್ತವವೆಂದರೆ ಇಂದು ನಮ್ಮ ಜನಸಂಖ್ಯೆಯ ಕೆಲ ಶೇಕಡವಾರು ಜನರು ಮಾತ್ರ ಅಗತ್ಯವಿದ್ದಾಗ ನ್ಯಾಯ ವಿತರಣಾ ವ್ಯವಸ್ಥೆಯನ್ನು ಸಂಪರ್ಕಿಸುತ್ತಾರೆ. ಬಹುಪಾಲು ಅರಿವು ಮತ್ತು ಅಗತ್ಯ ವಿಧಾನಗಳ ಕೊರತೆಯಿಂದ ಜನ ಮೌನವಾಗಿ ನರಳುತ್ತಿದ್ದಾರೆ ಎಂದರು.

ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸುವ ಗುರಿಯ ಸುತ್ತ ಆಧುನಿ ಭಾರತವನ್ನು ನಿರ್ಮಿಸಲಾಗಿದೆ. ಪ್ರಾಜೆಕ್ಟ್ ಪ್ರಜಾಪ್ರಭುತ್ವವು ಎಲ್ಲರ ಪಾಲ್ಗೊಳ್ಳುವಿಕೆಗೆ ಜಾಗವನ್ನು ಒದಗಿಸುವುದು. ಸಾಮಾನಿಕ ವಿಮೋಚನೆಯಿಲ್ಲದೆ ಭಾಗವಹಿಸುವಿಕೆ ಸಾಧ್ಯವಿಲ್ಲ. ನ್ಯಾಯದ ಪ್ರವೇಶವು ಸಾಮಾಜಿಕ ವಿಮೋಚನೆಗೆ ಒಂದು ಸಾಧನವಾಗಿದೆ ಎಂದು ಸಿಜೆಐ ಹೇಳಿದರು.

ಕಾನೂನು ನೆರವು ಒದಗಿಸುವ ಮತ್ತು ವಿಚಾರಣಾಧೀನ ಕೈದಿಗಳ ಬಿಡುಗಡೆಯನ್ನು ಖಾತ್ರಿಪಡಿಸುವ ಕುರಿತು ಪ್ರತಿಕ್ರಿಯಿಸಿದ ಸಿಜೆಐ ದೇಶದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳ ಸಕ್ರಿಯ ಪರಿಗಣನೆ ಮತ್ತು ಮಧ್ಯಸ್ಥಿಕೆಗೆ ಕರೆ ನೀಡುವ ಪ್ರಮುಖ ಅಂಶವೆಂದರೆ ವಿಚಾರಣಾಧೀನ ಕೈದಿಗಳ ಸ್ಥಿತಿ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular