ಮಾಜಿ ಶಾಸಕ ಕೆ.ಎನ್.ರಾಜಣ್ಣನವರನ್ನು ತೇಜೋವಧೆ, ಅವಹೇಳನ ಮಾಡುವುದನ್ನು ನಿಲ್ಲಸದಿದ್ದರೆ ಅಹಿಂದ ವರ್ಗಗಳು ಸುಮ್ಮನಿರುವುದಿಲ್ಲ ಎಂದು ತುಮಕೂರು ಹಿಂದುಳಿದ ವರ್ಗಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ 30ಕ್ಕೂ ಹೆಚ್ಚು ಅಹಿಂದ ಮುಖಂಡರು, ರಾಜಣ್ಣ ಬಾಯಿತಪ್ಪಿನಿಂದ ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ. ಆಕಸ್ಮಿಕವಾಗಿ ಆಡಿತ ಮಾತನ್ನು ಹಿಡಿದುಕೊಂಡು ಜೆಡಿಎಸ್ ಮುಖಂಡರು ರಾಜಣ್ಣ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಒಕ್ಕೂಟದ ಸದಸ್ಯರು ಹೇಳಿದರು.
ಹಿಂದುಳಿದ ವರ್ಗಗಳ ನಾಯಕ ಕೆ.ಎನ್.ರಾಜಣ್ಷನವರನ್ನು ನಿಂದಿಸುವುದು, ಅಸಭ್ಯ ಮಾತುಗಳಿಂದ ಮಾತನಾಡುವುದು ಶೋಭೆ ತರವಂತಹವುದಲ್ಲ, ಇದನ್ನು ಹೀಗೆಯೆ ಮುಂದುವರೆಸಿದರೆ ಹಿಂದುಳಿದ ವರ್ಗಗಳ ಶಕ್ತಿಯೇನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು..
ಆಕಸ್ಮಿಕ ಮಾತಿನಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದರು. ಅದರ ನಂತರವೂ ಒಂದು ವರ್ಗ ಕೆ.ಎನ್.ರಾಜಣ್ಣನವರನ್ನು ತೋಜೋವಧೆ ಮಾಡುತ್ತಿದೆ. ರಾಜಕೀಯವಾಗಿ ಮುಗಿಸುವವುದಾಗಿ ಪ್ರತಿಭಟನೆ ನಡೆಸುತ್ತಿದೆ. ಇದು ಆ ಒಂದು ವರ್ಗಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ದೇವೇಗೌಡರ ಕುಟುಂಬ ವರ್ಗದವರು ಸಹ ಕೆ.ಎನ್.ರಾಜಣ್ಣ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಬಾರದು, ಹಿಂದುಳಿದ ವರ್ಗಗಳ ಬೆಂಬಲದಿಂದ 1994ರಲ್ಲಿ 9 ಜನ ಶಾಸಕರನ್ನು ಹಿಂದುಳಿದ ವರ್ಗ ಗೆಲ್ಲಿಸಿ ಕೊಟ್ಟಿದೆ. ಇದರಿಂದ ದೇವೇಗೌಡರು ಮುಖ್ಯಮಂತ್ರಿಯಾದರು, ಹಾಗೆಯೇ 1996 ರಲ್ಲಿ ತುಮಕೂರಿನಿಂದ ಸಿ.ಎನ್.ಭಾಸ್ಕರಪ್ಪ, ಚಿತ್ರದುರ್ಗದಿಂದ ಕೋದಂಡರಾಮಯ್ಯ, ಚಿಕ್ಕಬಳ್ಳಾಪುರದಿಂದ ಆರ್.ಎಲ್.ಜಾಲಪ್ಪ ಅವರನ್ನು ಗೆಲ್ಲಿಸಿದ್ದರಿಂದ ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಿಟರ್ ಆರ್.ಸಿ.ಆಂಜಿನಪ್ಪ, ಧನಿಯಾಕುಮಾರ್, ಸಿಂಗದಹಳ್ಳಿ ರಾಜಕುಮಾರ್, ಹೆಚ್.ಎಂ.ಟಿ.ರೇವಣ್ಣಸಿದ್ದಯ್ಯ, ಕೊಟ್ಟಶಂಕರ್, ಪಿ.ಎನ್.ರಾಮಯ್ಯ, ಗಂಗಣ್ಣ, ಮಲ್ಲಿಕಾರ್ಜುನ ಯ್ಯ, ಪ್ರತಾಪ್, ನಾಗರಾಜು ಮೊದಲಾದವರು ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ಆಡಿಟರ್ ಆರ್.ಸಿ.ಆಂಜಿನಪ್ಪ, ಧನಿಯಾಕುಮಾರ್, ಸಿಂಗದಹಳ್ಳಿ ರಾಜಕುಮಾರ್, ಹೆಚ್.ಎಂ.ಟಿ.ರೇವಣ್ಣಸಿದ್ದಯ್ಯ, ಕೊಟ್ಟಶಂಕರ್, ಪಿ.ಎನ್.ರಾಮಯ್ಯ, ಗಂಗಣ್ಣ, ಮಲ್ಲಿಕಾರ್ಜುನ ಯ್ಯ, ಪ್ರತಾಪ್, ನಾಗರಾಜು, ಮುಂತಾದವರಿದ್ದರು.