ಬಿಜೆಪಿ ಸರ್ಕಾರ ಯಾವುದೇ ಅರ್ಹತೆಯಿಲ್ಲ ರೋಹಿತ್ ಚಕ್ರತೀರ್ಥ ಅವರಿಗೆ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಜವಾಬ್ದಾರಿಯನ್ನು ನೀಡಿದ್ದು ಆರ್.ಎಸ್.ಎಸ್. ಹಿನ್ನೆಲೆಯಿರುವ ಆ ವ್ಯಕ್ತಿ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ದೇಶದ ಇತಿಹಾಸವನ್ನು ತಿರುಚಿ ಸತ್ಯವಲ್ಲದ ಸಂಗತಿಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಯತ್ನ ಮಾಡಿದ್ದಾರೆ. ನಾಡಿನ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಬುದ್ದ, ಬಸವಣ್ಣ, ಮಹಾವೀರ, ಭಗತ್ ಸಿಂಗ್, ಅಂಬೇಡ್ಕರ್, ನಾರಾಯಣಗುರು ಮತ್ತು ಕುವೆಂಪು ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಪಠ್ಯವನ್ನು ತಿರುಚಿ ಅಪಮಾನ ಮಾಡಲಾಗಿದೆ. ಹಲವು ಮಠಾಧೀಶರು, ಚಿಂತಕರು, ಸಾಹಿತಿಗಳು ಮತ್ತು ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಪರಿಷ್ಕೃತ ಪಠ್ಯಪುಸ್ತಕವನ್ನು ಮಕ್ಕಳಿಗೆ ನೀಡಲು ಮುಂದಾಗಿದೆ ಎಂದು ಆಪಾದಿಸಿದರು.
ಆರನೇ ತರಗತಿ ಪಠ್ಯಪುಸ್ತಕದಲ್ಲಿ ವಾಲಿಕಾರ್ ಬರೆದ ನೀ ಹೋದ ಮರುದಿನ ಎಂಬ ಅಂಬೇಡ್ಕರ್ ಕುರಿತ ಪಠ್ಯವನ್ನು ಕೈಬಿಡಲಾಗಿದೆ. 7ನೇ ತರಗತಿ ಸಮಾಜವಿಜ್ಞಾನ ಪಠ್ಯದಲ್ಲಿ ಅಂಬೇಡ್ಕರ್ ತಂದೆ-ತಾಯಿ ಹುಟ್ಟಿದ ಸ್ಥಳ ಸೇರಿದಂತೆ ಹಲವು ವಿಚಾರಗಳನ್ನು ಕೈಬಿಡಲಾಗಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಭಾಘವನ್ನು ತೆಗೆದು ಹಾಕಲಾಗಿದೆ. ಸಂವಿಧಾನ ರಚನೆಯಲ್ಲಿ ಬಿ.ಎನ್.ರಾವು ಅವರ ಕೊಡುಗೆ ಅಪಾರ ಎಂದು ತಿಳಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಅಂಬೇಢ್ಕರ್ ಅವರನ್ನು ಬಿಟ್ಟು ಬಿಎಂ ಅವರೇ ಸಂವಿಧಾನ ರಚನೆ ಮಾಡಿದ್ದಾರೆಂಬಂತೆ ಬಿಂಬಿಸುವ ಪ್ರಯತ್ನ ನಡೆಸಲಾಗಿದೆ ಎಂದುದ ಟೀಕಿಸಿದರು.
10ನೇ ತರಗತಿ ಸಮಾಜ ವಿಜ್ಞಾನದಲ್ಲಿ ಗಾಂಧಿಯುಗ ಪಾಠದಲ್ಲಿ ಅಂಬೇಡ್ಕರ್ ಅವರ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಧಮ್ಮ ಸ್ವೀಕರಿಸಿದರು ಎಂಬ ಅಂಶವನ್ನು ಕೈಬಿಟ್ಟಿದ್ದಾರೆ. 9ನೇ ತರಗತಿಯ ಪಠ್ಯದಲ್ಲಿ ಅರವಿಂದ ಮಾಲಗತ್ತಿ ಅವರ ಮರಳಿ ಮನೆಗೆ ಎಂಬ ಪಠ್ಯವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.
9ನೇ ತರಗತಿ ಪಠ್ಯದಲ್ಲಿ ಬಸವಣ್ಣನವರು ಜನಿವಾರ ಧರಿಸಿ ಕೂಡಲಸಂಗಮ್ಮಕ್ಕೆ ತೆರಳಿದ್ದರು ಎಂದು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಜಾತಿ ವ್ಯವಸ್ಥೆ ವಿರುದ್ಧ ನಿಂತಿದ್ದ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿದೆ. ಅವರು ಜನಿವಾಋವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ಹೋಗಿದ್ದು ಸತ್ಯ. ಪರಿಷ್ಕೃತ ಪಠ್ಯದಲ್ಲಿ ಇದನ್ನು ಮರೆಮಾಚಿ ಸುಳ್ಳನ್ನು ಸೇರಿಸಲಾಗಿದೆ. ಇದು ಬಸವಣ್ಣನವರಿಗೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದರು.ರ