ಕತಾರ್, ಇರಾನ್ ಮತ್ತು ಕುವೈತ್ ಜೊತೆ ಸೇರಿಕೊಂಡಿರುವ ಸೌದಿ ಅರೇಬಿಯಾ ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಮುಖಂಡರು ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿದ್ದು ನಂಬಿಕೆಗಳು ಮತ್ತು ಧರ್ಮಗಳಿಗೆ ಗೌರವ ನೀಡಬೇಕು ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಜೆಪಿ ವಕ್ತಾರರು ನೀಡಿದ ಹೇಳಿಕೆಗಳಿಗೆ ತನ್ನ ಖಂಡನೆ ವ್ಯಕ್ತಪಡಿಸಿದ್ದು, ಇದು ಪ್ರವಾದಿ ಮೊಹಮದ್ ಅವರನ್ನು ಅವಮಾನಿಸಿದೆ ಎಂದು ಹೇಳಿದೆ.
ಸಚಿವಾಲಯವು ಇಸ್ಲಾಮಿಕ್ ಧರ್ಮದ ಚಿಹ್ನೆಗಳ ವಿರುದ್ಧ ಪೂರ್ವಾಗ್ರಹವನ್ನು ಶಾಶ್ವತವಾಗಿ ತಿರಸ್ಕರಿಸುತ್ತದೆ ಎಂದು ಪುನರುಚ್ಚರಿಸಿದೆ.
ಇದು ಎಲ್ಲಾ ಧಾರ್ಮಿಕ ವ್ಯಕ್ತಿಗಳು ಮತ್ತು ಚಿಹ್ನೆಗಳ ವಿರುದ್ಧ ಪೂರ್ವಾಗ್ರವನ್ನು ಉಂಟು ಮಾಡುವ ಯಾವುದನ್ನಾದರೂ ತಿರಸ್ಕರಿಸಬೇಕು ಎಂದು ಹೇಳಿದೆ.
ಬಿಜೆಪಿ ಮುಖಂಡರನ್ನು ಅಮಾನತಗೊಳಿಸಲು ಬಿಜೆಪಿ ತೆಗೆದುಕೊಂಡ ಕ್ರಮಗಳನ್ನು ಸ್ವಾಗತಿಸುವಾಗ ಸಚಿವಾಲಯವು ನಂಬಿಕೆಗಳು ಮತ್ತು ಧರ್ಮಗಳಿಗೆ ಗೌರವವನ್ನು ನೀಡುವಂತೆ ಪುನರುಚ್ಚರಿಸಿದೆ.
ಕತಾರ್, ಇರಾನ್ ಮತ್ತು ಕುವೈತ್ ಭಾನುವಾರ ಭಾರತದ ರಾಯಭಾರಿಗಳನ್ನು ಕರೆಸಿದ್ದು, ಪ್ರಮುಖ ಗಲ್ಫ್ ರಾಷ್ಟ್ರಗಳು ಪ್ರವಾದಿ ಮೊಹಮದ್ ವಿರುದ್ದ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳಿಗೆ ತಮ್ಮ ತೀವ್ರ ಪ್ರತಿಭಟನೆ ಮತ್ತು ಖಂಡನೆಯನ್ನು ವ್ಯಕ್ತಪಡಿಸಿದೆ. ಈಗ ಸೌದಿ ಅರೇಬಿಯ ಕೂಡ ಬಿಜೆಪಿ ನಾಯಕರ ಹೇಳಿಕೆಗಳನ್ನು ಖಂಡಿಸಿದ್ದು ತೀವ್ರ ವಿರೋಧ ವ್ಯಕ್ತಪಡಿಸಿದೆ.