ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಜೀವಾವಧಿ ಶಿಕ್ಷೆ ಅನುಭವಿಸಿರುವ ಎ.ಜಿ.ಪೆರಾರಿವಲನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು ಪೆರಾರಿವಲನ್ ಗೆ ಪರಿಹಾರ ನೀಡಲು ಅರ್ಟಿಕಲ್ 142ರ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರವನ್ನು ಬಳಿಸಿದೆ.
ಸಂಬಂಧಿತ ಪರಿಗಣನೆಗಳ ಆಧಾರದ ಮೇಲೆ ರಾಜ್ಯ ಕ್ಯಾಬಿನೆಟ್ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾಗಿ 142ನೇ ವಿಧಿಯಂತೆ ಅಪರಾಧಿಯನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಪೀಠ ಹೇಳಿದೆ.
142ನೇ ವಿಧಿಯು ಸುಪ್ರೀಂಕೋರ್ಟ್ ನ ತೀರ್ಪುಗಳ ಮತ್ತು ಆದೇಶಗಳ ಜಾರಿ ಮತ್ತು ಅನ್ವೇಷಣೆಗೆ ಸಂಬಂಧಿಸಿದ ಆದೇಶಗಳು ಇತ್ಯಾದಿಗಳ ಬಗ್ಗೆ ವ್ಯವಹರಿಸುತ್ತದೆ.
ಮಾರ್ಚ್ 9ರಂದು ಸರ್ವೋಚ್ಛ ನ್ಯಾಯಾಲಯವು ಪೆರಾರಿವಲನ್ ಗೆ ಜಾಮೀನು ನೀಡಿದ್ದು, ಅವರ ಸುದೀರ್ಘ ಸೆರೆವಾಸ ಮತ್ತು ಪೆರೋಲ್ ನಲ್ಲಿ ಹೊರಬಂದಾಗ ಯಾವುದೇ ದೂರುಗಳು ಕೇಳಿಬಂದಿಲ್ಲ.
ಬಹುಶಿಸ್ತಿನ ಮಾನಿಟರಿಂಗ್ ಏಜೆನ್ಸಿಯ ತನಿಖೆ ಪೂರ್ಣಗೊಳ್ಳುವವರೆಗೆ ಪ್ರಕರಣದಲ್ಲಿ ತನ್ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ 47 ವರ್ಷದ ಪೆರಾರಿವಲನ್ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮೇ 21, 1991ರ ರಾತ್ರಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್ ನಿಂದ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು.
ಮೇ 1999ರ ಆದೇಶದಲ್ಲಿ ಸುಪ್ರೀಂಕೋರ್ಟ್ ನಾಲ್ವರು ಅಪರಾಧಿಗಳಾದ ಪೆರಾರಿವಲನ್, ಮುರುಗನ್, ಸಂತಮ್ ಮತ್ತು ನಳಿನಿ ಅವರ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು.
ಫೆಬ್ರವರಿ 18, 2014ರಂದು ಕೇಂದ್ರದಿಂದ ಕ್ಷಮಾದಾನ ಅರ್ಜಿಗಳನ್ನು ನಿರ್ಧರಿಸಲು 11 ವರ್ಷಗಳ ವಿಳಂಬದ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಪೆರಾರಿವಲನ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.


