Monday, September 16, 2024
Google search engine
Homeಮುಖಪುಟಶ್ರೀಲಂಕಾ ಅಧ್ಯಕ್ಷರ ಕಚೇರಿಗೆ ಮಹಿಂದಾ ರಾಜಪಕ್ಸೆ ಬೆಂಬಲಿಗರ ಮುತ್ತಿಗೆ

ಶ್ರೀಲಂಕಾ ಅಧ್ಯಕ್ಷರ ಕಚೇರಿಗೆ ಮಹಿಂದಾ ರಾಜಪಕ್ಸೆ ಬೆಂಬಲಿಗರ ಮುತ್ತಿಗೆ

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸೋಮವಾರ ರಾಜಿನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಬೆಂಬಲಿಗರು ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕನಿಷ್ಠ 78 ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ದೇಶವ್ಯಾಪಿ ಕರ್ಪ್ಯೂ ವಿಧಿಸಲು ಮತ್ತು ರಾಜಧಾನಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ರಾಜಿನಾಮೆ ನೀಡಿದ ಬೆನ್ನಲ್ಲೇ ಕನಿಷ್ಠ ಇಬ್ಬರು ಕ್ಯಾಬಿನೆಟ್ ಸಚಿವರು ಸಹ ತಮ್ಮ ರಾಜಿನಾಮೆಯನ್ನು ಘೋಷಿಸಿದ್ದಾರೆ.

ಕೊಲಂಬೋದಲ್ಲಿ ಹಿಂಸಾತ್ಮಕ ದೃಶ್ಯಗಳು ಕಂಡುಬಂದ ನಂತರ ಪ್ರಧಾನಿ ಮಹಿಂದಾ ಅವರು ತಮ್ಮ ರಾಜಿನಾಮೆ ಪತ್ರವನ್ನು ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರಿಗೆ ಕಳುಹಿಸಿದ್ದಾರೆ.

ದೇಶ ಎದುರಿಸುತ್ತಿರುವ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಮಧ್ಯಂತರ ಆಡಳಿತವನ್ನು ರಚಿಸುವಂತೆ ಅವರ ಕಿರಿಯ ಸಹೋದರ ಮತ್ತು ಅಧ್ಯಕ್ಷ ಗೊಟಬೊಯ ನೇತೃಥ್ವದ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಹಿಂಸಾಚಾರ ಭುಗಿಲೇಳುವಂತೆ ಆಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾವು ಪ್ರಸ್ತುತ 1948ರಲ್ಲಿ ಬ್ರಿಟನ್ ನಿಂದ ಸ್ವಾತಂತ್ರ್ಯ ಪಡೆದ ನಂತರ ಅಭೂತಪೂರ್ವ ಆರ್ಧಿಕ ಪ್ರಕ್ಷುಬ್ದತೆಯಲ್ಲಿದೆ. ಬಿಕ್ಕಟ್ಟು ಭಾಗಶಃ ವಿದೇಶಿ ಕರೆನ್ಸಿಯ ಕೊರತೆಯಿಂದ ಉಂಟಾಗುತ್ತದೆ. ಇದರರ್ಥ ದೇಶವು ಪ್ರಧಾನ ಆಹಾರಗಳು ಮತ್ತು ಇಂಧನದ ಆಮದುಗಳಿಗೆ ಪಾವತಿಸಲು ಸಾಧ್ಯವಿಲ್ಲ. ತೀವ್ರ ಕೊರತೆ ಮತ್ತು ಅತಿ ಹೆಚ್ಚಿನ ಬೆಲೆಗಳಿಗೆ ಕಾರಣವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular