Monday, September 16, 2024
Google search engine
Homeಮುಖಪುಟಕಾಬೂಲ್ ಮಸೀದಿಯಲ್ಲಿ ಸ್ಪೋಟ - 15 ಮಂದಿ ಸಾವು, 20 ಮಂದಿಗೆ ಗಾಯ

ಕಾಬೂಲ್ ಮಸೀದಿಯಲ್ಲಿ ಸ್ಪೋಟ – 15 ಮಂದಿ ಸಾವು, 20 ಮಂದಿಗೆ ಗಾಯ

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿರುವ ಮಸೀದಿಯೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ಮುಸ್ಲೀಮರ ಪವಿತ್ರ ತಿಂಗಳು ರಂಜಾನ್ ಕೊನೆಯ ಶುಕ್ರವಾರದಂದು ನೂರಾರು ಆರಾಧಕರು ಪ್ರಾರ್ಥನೆಗಾಗಿ ಮಸೀದಿಯಲ್ಲಿ ಸೇರಿದ್ದರು. ಇದರಿಂದ ಖಲೀಫಾ ಆಗ ಗುಲ್ ಜಾನ್ ಮಸೀದಿ ತುಂಬಿತ್ತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಸಾವು ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ತಾಲಿಬಾನ್ ನೇಮಿಸಿದ ಆಂತರಿಕ ಸಚಿವಾಲಯದ ವಕ್ತಾರ ಮೊಹಮ್ಮದ್ ಸಫಿ ಟಾಕೋರ್ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ತಾಲಿಬಾನ್ ಭದ್ರತಾ ಸಿಬ್ಬಂದಿ ಮಸೀದಿ ಪ್ರದೇಶವನ್ನು ಸುತ್ತುವರೆದಿದ್ದಾರೆ. ಸ್ಫೋಟದ ಮೂಲ ತಕ್ಷಣವೇ ತಿಳಿದುಬಂದಿಲ್ಲ. ಸ್ಪೋಟದ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟವು ಎಷ್ಟು ತೀವ್ರವಾಗಿತ್ತೆಂದರೆ ಮಸೀದಿಯ ನೆರೆಹೊರೆಯು ಸ್ಪೋಟದಿಂದ ಭೀತರಾಗಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ. ಸ್ಫೋಟದಿಂದ ಸುರಕ್ಷತೆಯ ಬಗ್ಗೆ ಆತಂಕ ಆರಂಭವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಆಫ್ಘಾನಿಸ್ತಾನದ ಬಹುಪಾಲು ಸುನ್ನಿ ಮುಸ್ಲೀಮರಿಗೆ ಸೇರಿದ ಮಸೀದಿಯನ್ನು ತಲುಪಲು ಆಂಬ್ಯುಲೆನ್ಸ್ ಗಳು ಕಾಬೂಲ್ ಪೂರ್ವದ ನೆರೆಹೊರೆಯಲ್ಲಿ ಕಿರಿದಾದ ರಸ್ತೆಯ ಅಂತ್ಯದವರೆಗೆ ತೆರಳಬೇಕಾಯಿತು ಎಂದು ಹೇಳಲಾಗಿದೆ.

ದೇಶಾದ್ಯಂತ ನಿರಂತರ ದಾಳಿಗಳ ನಡುವೆ ಸರಣಿ ಸ್ಫೋಟಗಳ ಸಾಲಿಗೆ ಇದು ಸೇರಿದೆ. ಮಸೀದಿಗಳ ಮೇಲಿನ ಇದೇ ರೀತಿಯ ದಾಳಿಗಳು ಇತ್ತೀಚೆಗೆ ದೇಶದ ಅಲ್ಪಸಂಖ್ಯಾತ ಶಿಯಾ ಮುಸ್ಲೀಮರನ್ನು ಗುರಿಯಾಗಿಸಿಕೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular