Thursday, September 19, 2024
Google search engine
Homeಮುಖಪುಟಪಾಕಿಸ್ತಾನ ನೂತನ ಪ್ರಧಾನಿ ಷರೀಫ್ ಅವಿರೋಧ ಆಯ್ಕೆ

ಪಾಕಿಸ್ತಾನ ನೂತನ ಪ್ರಧಾನಿ ಷರೀಫ್ ಅವಿರೋಧ ಆಯ್ಕೆ

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಸಂಸತ್ತಿನಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿ ಶಾ ಮಹಮೂದ್ ಖುರೇಷಿ ತಮ್ಮ ಪಾಕಿಸ್ಥಾನ್ ತೆಹ್ರಿಕ್ ಇ ಇನ್ಸಾಪ್ ಪಕ್ಷವು ಮತದಾನವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಖುರೇಷಿ ಚುನಾವಣೆಯನ್ನು ಬಹಿಷ್ಕರಿಸಿದ ನಂತರ 70 ವರ್ಷದ ಶೆಹಬಾಜ್ ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದರು.

342 ಸದಸ್ಯರ ಸದನದಲ್ಲಿ ಗೆಲ್ಲುವ ಅಭ್ಯರ್ಥಿ ಕನಿಷ್ಠ 172 ಶಾಸಕರ ಬೆಂಬಲ ಪಡೆಯಬೇಕು. ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಅವರು 174 ಮತಗಳನ್ನು ಪಡೆದು ಸರಳ ಬಹುಮತದಿಂದ ಆಯ್ಕೆಯಾದರು.

ಶೆಹಬಾನ್ ಅವರು ಪಾಕಿಸ್ತಾನದ 23ನೇ ಪ್ರಧಾನಿಯಾಗಿದ್ದಾರೆ. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ರಾಜಕೀಯವಾಗಿ ನಿರ್ಣಾಯಕ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ.

ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಬದಲಿಗೆ ಜಂಟಿ ವಿರೋಧ ಪಕ್ಷದ ಸಭೆಯಲ್ಲಿ ಶೆಹಬಾಜ್ ಅವರ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಪ್ರಸ್ತಾಪಿಸಿದ್ದರು.

ಅವಿಶ್ವಾಸ ಮತದ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ವಜಾಗೊಳಿಸಿದ ನಂತರ ಸದನದ ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಭಾನುವಾರ ನಡೆಯಿತು. ದೇಶದ ಇತಿಹಾಸದಲ್ಲಿ ಸದನದ ವಿಶ್ವಾಸವನ್ನು ಕಳೆದುಕೊಂಡ ನಂತರ ಮನೆಗೆ ಕಳುಹಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular