ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ತುಮಕೂರು ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ದರೈಸ್ತ್ರೀ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
ದಲಿತ, ರೈತ ಮತ್ತು ಸ್ತ್ರೀಯರನ್ನು ಪ್ರತಿನಿಧಿಸುವ ದರೈಸ್ತ್ರೀ ಪ್ರಶಸ್ತಿಯನ್ನು ಬಕಾಲ ಕವಿ ಕೆ.ಬಿ.ಸಿದ್ದಯ್ಯ ಅವರಿಂದ ಸ್ಥಾಪಿತವಾಗಿದ್ದು ಇದುವರೆಗೆ ಮೂವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕೆ.ಬಿ.ಯವರ ನೆನಪಿಗಾಗಿ ನೀಡಲಾಗುತ್ತಿರುವ ಈ ಸಾಲಿನ ಪ್ರಶಸ್ತಿಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರಿಗೆ ನೀಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಮಚಂದ್ರಪ್ಪ ಮತ್ತು ಕಾರ್ಯದರ್ಶಿ ಡಾ.ಶಿವಣ್ಣ ತಿಮ್ಲಾಪುರ ಅವರು ತಿಳಿಸಿದ್ದಾರೆ.
ಡಾ.ರಾಜಪ್ಪ ದಳವಾಯಿ, ಬಾ.ಹ.ರಮಾಕುಮಾರಿ ಮತ್ತು ಟಿ.ಎಸ್.ವಿವೇಕಾನಂದ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 10ರಂದು ಅಪರಾಹ್ನ 3.30ಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.