ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳು ಪ್ರತಿ ಲೀಟರ್ ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಹಾಗೆಯೇ ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 50 ರೂಗಳಷ್ಟು ಹೆಚ್ಚಿಸಲಾಗಿದೆ.
ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳು ಚುನಾವಣೆ ಸಂಬಂಧಿತ ವಿರಾಮವನ್ನು ಕೊನೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 95.41ರೂ ಇತ್ತು. ಈಗ 96.21 ರೂಗೆ ಹೆಚ್ಚಳವಾಗಿದೆ. ಡೀಸೆಲ್ ದರ ಲೀಟರ್ ಗೆ 86.67 ರಿಂದ 87.47ಕ್ಕೆ ಏರಿಕೆಯಾಗಿದೆ.
14.2 ಕೆಜಿ ಸಬ್ಸಿಡಿ ರಹಿತ ಎಲ್.ಪಿ.ಜಿ ಸಿಲಿಂಡರ್ ಈಗ ದೇಶದ ರಾಜಧಾನಿ ನವದೆಹಲಿಯಲ್ಲಿ 949.50 ರೂಗೆ ಏರಿಕೆ ಮಾಡಲಾಗಿದೆ.
ಅಕ್ಟೋಬರ್ 6ರಂದು ಎಲ್.ಪಿ.ಜಿ ದರವನ್ನು ಕೊನೆಯ ಬಾರಿಗೆ ಪರಿಷ್ಕರಿಸಲಾಗಿದ್ದರೂ, ಉತ್ತರ ಪ್ರದೇಶ ಮತ್ತು ಪಂಜಾಬ್ ನಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆಯಾಗಿತ್ತು.
ಕಚ್ಚಾ ವಸ್ತುಗಳ ವೆಚ್ಚದ ಹೊರತಾಗಿಯೂ ಬೆಲೆಗಳು ಪ್ರೀಜ್ ಆಗಿವೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರಲ್ ಗೆ 81-82 ಡಾಲರ್ ನಷ್ಟಿದ್ದ ಬೆಲೆ ಈಗ 114 ಡಾಲರ್ ಗಳಿಗೆ ಏರಿಕೆ ಕಂಡಿದೆ.
5 ಕೆ.ಜಿ. ಎಲ್.ಪಿ.ಜಿ ಸಿಲಿಂಡರ್ ನ ಬೆಲೆ ಈಗ 349 ರೂ ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂಗೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.


