Thursday, January 29, 2026
Google search engine
Homeಮುಖಪುಟಕೃಷಿ ಕಾಯ್ದೆಗಳಿಗೆ ರೈತ ಸಂಘಗಳ ಬೆಂಬಲ - ಸುಪ್ರೀಂಕೋರ್ಟ್ ನೇಮಿಸಿದ ಸಮಿತಿ ವರದಿ

ಕೃಷಿ ಕಾಯ್ದೆಗಳಿಗೆ ರೈತ ಸಂಘಗಳ ಬೆಂಬಲ – ಸುಪ್ರೀಂಕೋರ್ಟ್ ನೇಮಿಸಿದ ಸಮಿತಿ ವರದಿ

ವರದಿ ಪ್ರಕಾರ ಸಮಿತಿಯು ಪ್ರತಿಭಟನೆ ನಡೆಸಿದ ರೈತರು ಸೇರಿದಂತೆ 266 ರೈತ ಸಂಘಟನೆಗಳಿಂದ ಮಾಹಿತಿ ಸಂಗ್ರಹಿಸಿದೆ. ಸಮಿತಿಯು ಪೋರ್ಟಲ್ ನಲ್ಲಿ 19,027 ಪ್ರತಿನಿಧಿಗಳು ಮತ್ತು 1520 ಇಮೇಲ್ ಗಳನ್ನು ಸ್ವೀಕರಿಸಿತ್ತು. ಸಮಿತಿಯು ಮಾರ್ಚ್ 19, 2021ಅರಂದು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿತ್ತು. ಆ ವರದಿಯನ್ನು ಬಹಿರಂಗಗೊಳಿಸುವಂತೆ ಪತ್ರ ಬರೆಯಲಾಗಿತ್ತು. ಹೀಗಾಗಿ ವರದಿ ಬಹಿರಂಗಗೊಂಡಿದ್ದು ಕೃಷಿಕಾಯ್ದೆಗಳ ಪರವಾಗಿ ರೈತರು ಒಲವು ತೋರಿಸಿದ್ದಾರೆ ಎಂದು ವರದಿ ತಿಳಿಸಿದೆ.

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹೆಚ್ಚಿನ ರೈತ ಸಂಘಟನೆಗಳು ಬೆಂಬಲಿಸಿದ್ದವು ಎಂದು ಈ ಕಾಯ್ದೆಗಳನ್ನು ಅಧ್ಯಯನ ಮಾಡಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ವರದಿ ಬಹಿರಂಗಪಡಿಸಿದೆ.

ರೈತ ಮುಖಂಡ ಮತ್ತು ಸಮಿತಿಯ ಸದಸ್ಯ ಅನಿಲ್ ಘನ್ವತ್ ವರದಿಯನ್ನು ಬಿಡುಗಡೆ ಮಾಡಿ ಸಮಿತಿಯ ಅಲೋಕನ ಕಾನೂನುಗಳ ಮೇಲೆ ಪ್ರಭಾವದ ದೃಷ್ಟಿಯಿಂದ ಪ್ರಾಮುಖ್ಯತೆ ಹೊಂದಿದ್ದರೂ ಅವುಗಳನ್ನು ಈಗಾಗಲೇ ರದ್ದುಗೊಳಿಸಿದೆ. ಇದು ನೀತಿ ನಿರೂಪಕರು ಮತ್ತು ರೈತರಿಗೆ ಗಮನಾರ್ಹವಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳಾದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯಿದೆ. ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, ಅಗತ್ಯ ಸರಕುಗಳ ಕಾಯಿದೆ ಅಂಗೀಕರಿಸಿತು. ನಿರಂತರ ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೂರು ಸದಸ್ಯರ ಸಮಿತಿಯನ್ನು ಅಧ್ಯಯನ ಮಾಡಲು ನೇಮಕ ಮಾಡಿತ್ತು.

ವರದಿ ಪ್ರಕಾರ ಸಮಿತಿಯು ಪ್ರತಿಭಟನೆ ನಡೆಸಿದ ರೈತರು ಸೇರಿದಂತೆ 266 ರೈತ ಸಂಘಟನೆಗಳಿಂದ ಮಾಹಿತಿ ಸಂಗ್ರಹಿಸಿದೆ. ಸಮಿತಿಯು ಪೋರ್ಟಲ್ ನಲ್ಲಿ 19,027 ಪ್ರತಿನಿಧಿಗಳು ಮತ್ತು 1520 ಇಮೇಲ್ ಗಳನ್ನು ಸ್ವೀಕರಿಸಿತ್ತು. ಸಮಿತಿಯು ಮಾರ್ಚ್ 19, 2021ಅರಂದು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿತ್ತು. ಆ ವರದಿಯನ್ನು ಬಹಿರಂಗಗೊಳಿಸುವಂತೆ ಪತ್ರ ಬರೆಯಲಾಗಿತ್ತು. ಹೀಗಾಗಿ ವರದಿ ಬಹಿರಂಗಗೊಂಡಿದ್ದು ಕೃಷಿಕಾಯ್ದೆಗಳ ಪರವಾಗಿ ರೈತರು ಒಲವು ತೋರಿಸಿದ್ದಾರೆ ಎಂದು ವರದಿ ತಿಳಿಸಿದೆ.

ದೇಶದ 3.83 ಕೋಟಿ ರೈತರನ್ನು ಪ್ರತಿನಿಧಿಸುವ 73 ಕೃಷಿ ಸಂಸ್ಥೆಗಳು ನೇರವಾಗಿ, ವಿಡಿಯೋ ಲಿಂಕ್ ಮೂಲಕ ಅವರೊಂದಿಗೆ ಸಂವಾದ ನಡೆಸಿವೆ ಎಂದು ಇಂಡಿಯನ್ಸ್ ಎಕ್ಸ್ ಪ್ರೆಸ್ ವರದಿಯನ್ನು ಉಲ್ಲೇಖಿಸಿ ಸುದ್ದಿ ಮಾಡಿದೆ. 73ರಲ್ಲಿ 3.3 ಕೋಟಿ ರೈತರನ್ನು ಒಳಗೊಂಡ 61 ಸಂಘಟನೆಗಳು ಕಾನೂನನ್ನು ಬೆಂಬಲಿಸಿವೆ. 51 ಲಕ್ಷ ರೈತರನ್ನು ಪ್ರತಿನಿಧಿಸುವ ನಾಲ್ಕು ಸಂಘಟನೆಗಳು ವಿರೋಧಿಸಿವೆ ಮತ್ತು 3.6 ಲಕ್ಷ ರೈತರನ್ನೊಳಗೊಂಡ ಏಳು ಸಂಘಟನೆಗಳು ತಿದ್ದುಪಡಿಯನ್ನು ಬಯಸಿವೆ ಎಂದು ವರದಿಯಲ್ಲಿ ಹೇಳಿದೆ.

ಸಮಿತಿಯ ಇತರ ಇಬ್ಬರು ಸದಸ್ಯರಾದ ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕೃಷಿ ವೆಚ್ಚಗಳ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಡಾ.ಪರಮೋದ್ ಕುಮಾರ್ ಜೋಶಿ ಸಮಿತಿಯಲ್ಲಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular