Friday, October 18, 2024
Google search engine
Homeಮುಖಪುಟಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ 18 ಅಧಿಕಾರಿಗಳ ಮನೆ, ಕಚೇರಿಗಳು, ಖಾಸಗಿ ಕಚೇರಿಗಳ ಮತ್ತು ಅಧಿಕಾರಿಗಳ ಸಂಬಂಧಿಕರು, ನಿಕಟವರ್ತಿಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ 18 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಡಿಎ, ಅರಣ್ಯ, ಲೋಕೋಪಯೋಗಿ, ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮೇಲೆ ದಾಳಿ ನಡೆಸಲಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ 18 ಅಧಿಕಾರಿಗಳ ಮನೆ, ಕಚೇರಿಗಳು, ಖಾಸಗಿ ಕಚೇರಿಗಳ ಮತ್ತು ಅಧಿಕಾರಿಗಳ ಸಂಬಂಧಿಕರು, ನಿಕಟವರ್ತಿಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬಿಡಿಎ ಅಧಿಕಾರಿ ರಾಕೇಶ್ ಕುಮಾರ್, ಯಾದಗಿರಿ ವಲಯ ಅರಣ್ಯ ಅಧಿಕಾರಿ ರಮೇಶ್, ಸಾರಿಗೆ ಇಲಾಖೆಯ ಜ್ಞಾನೇಂದ್ರ ಕುಮಾರ್, ಲೋಕೋಪಯೋಗಿ ಇಲಾಖೆಯ ಕೌಜಲಗಿ ವಿಭಾಗದ ಇಂಜಿನಿಯರ್ ಬಸವರಾಜ ಶೇಖರ್, ಗದಗ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಬಸವಕುಮಾರ್, ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್, ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಮನೆಗಳು, ಕಚೇರಿ ಮತ್ತು ಆಪ್ತರು ಮನೆಗಳ ಮೇಲೆ ದಾಳಿ ನಡೆದಿದೆ.

ಬಾದಾಮಿಯ ವಲಯ ಅರಣ್ಯಾಧಿಕಾರಿ ಶಿವಾನಂದ ಪಿ.ಶರಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್, ದಾವಣಗೆರೆ ಜಿಲ್ಲಾ ಪರಿಸರ ವಲಯ ಅರಣ್ಯಾಧಿಕಾರಿ ಮಹೇಶ್ವರಪ್ಪ, ಗುಂಡ್ಲುಪೇಟೆಯ ಅಬಕಾರಿ ಇನ್ಸ್ ಪೆಕ್ಟರ್ ಚಲುವರಾಜ್, ಮೈಸೂರು ವಿಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ನಿವಾಸಗಳು, ಕಚೇರಿಗಳ ಮೇಲೆ ದಾಳಿಯಾಗಿದೆ.

ದಾಳಿಗೆ ಒಳಗಾದ ಅಧಿಕಾರಿಗಳು,

ಬಿ.ಕೆ.ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್, ಇಂಡಸ್ಟ್ರೀ ಮತ್ತು ಕಾಮರ್ಸ್, ಬೆಂಗಳೂರು.

ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲ್ಯಾಣ ಇಲಾಖೆ,

ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ,

ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿ ವಿಭಾಗ

ಕೃಷ್ಣನ್ ಸಹಾಯಕ ಇಂನಿಜಯರ್ ಹಾವೇರಿ.

ಗವಿರಂಗಪ್ಪ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿಡಬ್ಲ್ಯೂಡಿ ಚಿಕ್ಕಮಗಳೂರು

ದಯಾ ಸುಂದರ್ ರಾಜ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆಪಿಟಿಸಿಎಲ್ ದಕ್ಷಿಣ ಕನ್ಡಡ,

ಅಶೋಕ್ ರೆಡ್ಡಿ ಪಾಟೀಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕೃಷ್ಣಭಾಗ್ಯ ಜಲ ನಿಗಮ, ದೇವದುರ್ಗ, ರಾಯಚೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular