ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷದ ಗೆಲುವು ಜನರ ಜನಾದೇಶದ ನಿಜವಾದ ಪ್ರತಿಬಿಂಬವಲ್ಲ. ಚುನಾವಣಾ ಯಂತ್ರ ಬಳಸಿಕೊಂಡು ಬಿಜೆಪಿ ಮತಗಳನ್ನು ಲೂಟಿ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೆಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಎಂಬ ಕಾರಣಕ್ಕೆ ಬಿಜೆಪಿ ಹೆಚ್ಚು ಧ್ವನಿ ಎತ್ತಬಾರದು. ಈ ಗೆಲುವು ಜನಾದೇಶದ ನಿಜವಾದ ಪ್ರತಿಬಿಂಬವಲ್ಲ. ಮತ ಲೂಟಿಗೆ ಚುನಾವಣಾ ಯಂತ್ರವನ್ನು ಅಬ್ಬರದ ರೀತಿಯಲ್ಲಿ ಬಳಸಿಕೊಂಡಿರುವುದೇ ಈ ತೀರ್ಪು. ಅಖಿಲೇಶ್ ಯಾದವ್ ಸೋತಿರುವುದು ಜನರ ಜನಾದೇಶದಿಂದಲ್ಲ. ಆದರೆ ಮತಗಳ ಲೂಟಿಯಿಂದಾಗಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಸಮಾಜವಾದಿ ಪಕ್ಷದ ನೇತೃತ್ವದ ಪುನರುತ್ಥಾನದ ಕಾಮನಬಿಲ್ಲಿನ ಒಕ್ಕೂಟವನ್ನು ವಿಫಲಗೊಳಿಸಿ ಬಿಜೆಪಿ ಉತ್ತರ ಪ್ರದೇಶದಲ್ಲಿ 2ನೇ ಅವಧಿಗೆ ಮರಳಿದೆ. ಉತ್ತರಾಖಂಡ, ಮಣಿಪುರ ಮತ್ತು ಗೋವವನ್ನು ಉಳಿಸಿಕೊಂಡಿದೆ. ಆದರೆ ಆಮ್ ಆದ್ಮಿ ಪಕ್ಷವು ಪಂಜಾಬ್ ಬಹುಮತ ಗಳಿಸಿ ವಿಜಯ ದಾಖಲಿಸಿದೆ ಎಂದರು.
ಗೋವಾದಲ್ಲಿ ಟಿಎಂಸಿಯ ಸಾಧನೆಯ ಕುರಿತು ಮಾತನಾಡಿದ ಅವರು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಪ್ರಾರಂಭವಾದ 3 ತಿಂಗಳೊಳಗೆ ಶೇ.6ರಷ್ಟು ಮತಗಳನ್ನು ಗಳಿಸಿದೆ. ಇದು ಸಾಕು ಎಂದು ಹೇಳಿದರು.
ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳ ಮೈತ್ರಿಗೆ ತನ್ನ ಕರೆಯನ್ನು ಪುನರುಚ್ಛರಿಸಿದ ತೃಣಮೂಲ ಕಾಂಗ್ರೆಸ್ ಮುಖಸ್ಥರು ಕಾಂಗ್ರೆಸ್ ಗಾಗಿ ಸುಮ್ಮನೆ ಕುಳಿತುಕೊಳ್ಳುವುದು ಮತ್ತು ಕಾಯುವುದು ನಿಷ್ಪ್ರಯೋಜಕವಾಗಿದೆ ಎಂದು ತಿಳಿಸಿದರು.
ನಾಲ್ಕು ರಾಜ್ಯಗಳಲ್ಲಿನ ಗೆಲವು 2024ರ ಲೋಕಸಭಾ ಚುನಾವಣೆಗೆ ಜನರ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳುವ ಕೆಲವು ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ತಳ್ಳಿಹಾಕಿದ ಮಮತಾ ಬಿಜೆಪಿ ಹಗಲುಗನಸು ಕಾಣುವುದನ್ನು ಬಿಡಬೇಕು ಎಂದರು.
ಕಾಂಗ್ರೆಸ್ ಬಯಸಿದರೆ ನಾವೆಲ್ಲರೂ ಹೋರಾಡಬಹುದು. ಸದ್ಯಕ್ಕೆ ಅಕ್ರಮಣಕಾರಿಯಾಗಿರಬೇಡಿ. ಧನಾತ್ಮಕವಾಗಿರಬೇಕು. ಈ ಗೆಲುವು ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ. ಇದು ಅಪ್ರಾಯೋಜಿಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.