ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಶುಕ್ರವಾರ ಕಾಶ್ಮೀರದ ಗುರೆಜ್ ಸೆಕ್ಟರ್ ನಲ್ಲಿ ಪತನಗೊಂಡಿದೆ ಮಾಧ್ಯಮಗಳು ವರದಿ ಮಾಡಿವೆ.
ಹೆಲಿಕಾಪ್ಟರ್ ನಲ್ಲಿ ಅಸ್ವಸ್ಥ ಬಿಎಸ್ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಹೊರಟಿತ್ತು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕಾರ್ಯಾಚರಣೆ ನಡೆಯುತ್ತಿವೆ. ತಂಡಗಳನ್ನು ಕಾಲ್ನಡಿಗೆಯಲ್ಲಿ ಕಳುಹಿಸಲಾಗಿದೆ. ಆದರೆ ವಾಯು ವಿಚಕ್ಷಣ ತಂಡಗಳು ಬದುಕುಳಿದವರನ್ನು ಹುಡುಕುತ್ತಿವೆ.
ಅಪಘಾತ ಮತ್ತು ಸಾವು ನೋವುಗಳ ಕಾರಣ ತಕ್ಷಣವೇ ತಿಳಿದುಬಂದಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ. ಹೆಲಿಕಾಪ್ಟರ್ ಲ್ಯಾಂಡ್ ಆಗಲಿತ್ತು. ಆದರೆ ಹವಾಮಾನದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.