ಏಳು ಹಂತಗಳಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದ್ದು ಮತದಾರರ ಚಿತ್ತ ಯಾರತ್ತ ಎಂಬುದು ಕುತೂಹಲ ಮೂಡಿಸಿದೆ. ಈಗ ತಾನೆ ಹೊರಬಿದ್ದಿರುವ ಸಮೀಕ್ಷೆಗಳು ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿದಿವೆ.
ಆಡಳಿತಾರೂಢ ಬಿಜೆಪಿ ಹಿಂದೆ ಆಳ್ವಿಕೆ ಮಾಡುತ್ತಿದ್ದ ರಾಜ್ಯಗಳಲ್ಲಿ ಅಧಿಕಾರವನ್ನು ಪುನಃ ಹಿಡಿಯಬೇಕು ಎಂಬ ಛಲವನ್ನು ಹೊಂದಿದ್ದರೆ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಅಕಾಲಿ ಶಿರೊಮಣಿ ದಳ ಕೂಡ ಅಧಿಕಾರಕ್ಕೆ ಬರುವ ಕನಸ್ಸನ್ನು ಹೊತ್ತಿವೆ.
ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದ ಫಲಿತಾಂಶ ತೀವ್ರ ಕುತೂಹಲವನ್ನು ಕೆರಳಿಸಿದೆ. ರಾಜ್ಯದಲ್ಲಿ ಮತ್ತೆ ಆದಿತ್ಯನಾಥ್ ಅಧಿಕಾರ ಹಿಡಿಯುತ್ತಾರೆಯೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇಂದು ಸಂಜೆ 7ಗಂಟೆ ಸುಮಾರಿಗೆ ಚುನಾವಣೆಯ ನಂತರದ ಸಮೀಕ್ಷೆಗಳು ಹೊರಬಿದ್ದಿದ್ದು ದೊಡ್ಡರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆದಿತ್ಯನಾಥ್ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂಬುದನ್ನು ಸಾರಿವೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎನ್ನುತ್ತವೆ ಚುನಾವಣ ನಂತರ ಸಮೀಕ್ಷೆಗಳು. ನ್ಯೂಸ್ ಎಕ್ಸ್ ಪ್ರಕಾರ ಬಿಜೆಪಿ-211-225 ಸ್ಥಾನಗಳು ಲಭಿಸಲಿವೆ. ಇಂಡಿಯ ನ್ಯೂಸ್ ಸಮೀಕ್ಷೆಯಂತೆ ಬಿಜೆಪಿ 222-260 ಸ್ಥಾನಗಳು ಪಡೆಯಲಿದೆ. ಇಟಿಜಿ ಸಮೀಕ್ಷೆಯಂತೆ ಬಿಜೆಪಿ 230-245 ಸ್ಥಾನಗಳನ್ನು ಗಳಿಸಲಿದೆ. ನ್ಯೂಸ್ ಫಸ್ಟ್ ಸಮೀಕ್ಷೆಯ ಪ್ರಕಾರ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ನಾಲ್ಕು ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯುವುದನ್ನು ಖಚಿತಪಡಿಸಿವೆ. ಹಾಗೆಯೇ ಸಮಾಜವಾದಿ ಪಕ್ಷ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬುದನ್ನು ಸಮೀಕ್ಷೆಗಳು ಹೇಳಿವೆ. ನ್ಯೂಸ್ ಎಕ್ಸ್ ರೀತಿ ಸಮಾಜವಾದಿ ಪಕ್ಷ 146-160 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ನ್ಯೂಸ್ ಸಮೀಕ್ಷೆ ಪ್ರಕಾರ ಎಸ್.ಪಿ 135-165 ಸೀಟುಗಳು ಇಟಿಜಿ ಸಮೀಕ್ಷೆಯಂತೆ ಎಸ್.ಪಿ. 150-165 ಸ್ಥಾನಗಳನ್ನು ಗಳಿಸಲಿದೆ. ನ್ಯೂಸ್ ಫಸ್ಟ್ ರೀತಿ ಎಸ್.ಪಿ 160 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಹಾಗೆಯೇ ಬಹುಜನ ಸಮಾಜ ಪಕ್ಷ ಮೂರನೇ ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ನ್ಯೂಸ್ ಎಕ್ಸ್ ರೀತಿ ಬಹುಜನ ಸಮಾಜ ಪಕ್ಷ 14-24, ಇಂಡಿಯಾ ನ್ಯೂಸ್ ಪ್ರಕಾರ 4-9, ಇಟಿಜಿ ಸಮೀಕ್ಷೆಯಲ್ಲಿ 5-10 ನ್ಯೂಸ್ ಫಸ್ಟ್ ಎರಡು ಡಿಜಿಟಲ್ ದಾಟುವುದಿಲ್ಲ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಾ ಸಮೀಕ್ಷೆಗಳ ಪ್ರಕಾರ 10 ಸ್ಥಾನಗಳನ್ನು ಗಳಿಸುವುದಿಲ್ಲ ಎಂದು ಹೇಳಿವೆ. ನ್ಯೂಸ್ ಎಕ್ಸ್ 4-6, ಇಂಡಿಯಾ ನ್ಯೂಸ್ 1-3, ಇಟಿಜಿ 2-6 ಮತ್ತು ನ್ಯೂಸ್ ಫಸ್ಟ್ 4 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಹೇಳಿದೆ.
ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಸಮಬಲ ಪೈಪೋಟಿ ಏರ್ಪಟ್ಟಿದ್ದು ಅತಂತ್ರ ಫಲಿತಾಂಶ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಸ್ಪರ್ಧಿ ಕಾಂಗ್ರೆಸ್ ನಡುವೆ ನಿಕಟ ಪೈಪೋಟಿ ಏರ್ಪಟಿದೆ ಎಂದು ಭವಿಷ್ಯ ನುಡಿದಿವೆ. ಗೋವಾದಲ್ಲಿ ಅತಂತ್ರ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ಸಮೀಗಳು ಹೇಳಿವೆ.