Thursday, September 19, 2024
Google search engine
Homeಮುಖಪುಟಕದನ ವಿರಾಮ ಘೋಷಿಸಿದ ರಷ್ಯಾ

ಕದನ ವಿರಾಮ ಘೋಷಿಸಿದ ರಷ್ಯಾ

ಮಾರ್ಚ್ 5 ರಂದು ಮಾಸ್ಕೋ ಸಮಯ ಬೆಳಗ್ಗೆ 10 ರಿಂದ, ರಷ್ಯಾ ಕದನ ವಿರಾಮ ಘೋಷಿಸಿದ್ದು ಮರಿಯುಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್ ಗಳನ್ನು ತೆರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಯಕಟ್ಟಿನ ಬಂದರು ನಗರವಾದ ಮಾರಿಯುಪೋಲ್ ಸೇರಿದಂತೆ ಎರಡು ಮುತ್ತಿಗೆ ಹಾಕಿದ ನಗರಗಳ ನಿವಾಸಿಗಳನ್ನು ಸ್ಥಳಾಂತರಿಸಲು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ಕದನ ವಿರಾಮ ಘೋಷಿಸಿದೆ.

ಮಾರ್ಚ್ 5 ರಂದು ಮಾಸ್ಕೋ ಸಮಯ ಬೆಳಗ್ಗೆ 10 ರಿಂದ, ರಷ್ಯಾ ಕದನ ವಿರಾಮ ಘೋಷಿಸಿದ್ದು ಮರಿಯುಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್ ಗಳನ್ನು ತೆರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾರಿಯುಪೋಲ್ ನ ಮೇಯರ್ ವಾಡಿಮ್ ಬಾಯ್ಚೆಂಕೊ ಅವರು ಶನಿವಾರದಂದು ದಾಳಿಗಳ ನಂತರ ರಷ್ಯಾದ ಪಡೆಗಳಿಂದ ನಗರವು ದಿಗ್ಬಂಧನದಲ್ಲಿದೆ ಎಂದು ಹೇಳಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.

4,50,000 ಜನರಿರುವ ನಗರವು ಅಜೋವ ಸಮುದ್ರದಲ್ಲಿದೆ. ಇದು ಶೆಲ್ ಗಳ ದಾಳಿಗೆ ಒಳಗಾಗಿದೆ ಮತ್ತು ಚಳಿಗಾಲದ ಸಮಯದಲ್ಲಿ ನೀರು ಮತ್ತು ವಿದ್ಯುತ್ ಇಲ್ಲದೆ ಸಂಪರ್ಕ ಕಡಿತಗೊಂಡಿದೆ ಮಾಧ್ಯಮಗಳ ವರದಿಗಳು ತಿಳಿಸಿವೆ.

ಸದ್ಯಕ್ಕೆ, ನಾವು ಮಾನವೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಮಾರಿಯುಪೋಲ್ ಪ್ರದೇಶವನ್ನು ದಿಗ್ಬಂಧನದಿಂದ ಹೊರಬರಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದ್ದೇವೆ ಎಂದು ವಾಡಿಮ್ ಬಾಯ್ಚೆಂಕೊ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular