Thursday, September 19, 2024
Google search engine
Homeಮುಖಪುಟಉಕ್ರೇನ್ - ರಷ್ಯಾ ನಡುವೆ ಯುದ್ದ - ರಷ್ಯಾದ 1000ಕ್ಕೂ ಹೆಚ್ಚು ಸೈನಿಕರ ಹತ್ಯೆ

ಉಕ್ರೇನ್ – ರಷ್ಯಾ ನಡುವೆ ಯುದ್ದ – ರಷ್ಯಾದ 1000ಕ್ಕೂ ಹೆಚ್ಚು ಸೈನಿಕರ ಹತ್ಯೆ

ರಷ್ಯಾ ಯುದ್ದ ಮುಂದುರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಅಮೆರಿಕ ಸೇರಿದಂತೆ ಹಲವು ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಿದ್ದು ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳ ಮತ ಚಲಾಯಿಸದೇ ಹಿಂದೆ ಸರಿದಿವೆ.

ರಷ್ಯಾ ಉಕ್ರೇನ್ ಮೇಲೆ ಯುದ್ದ ಸಾರಿದ್ದು ಬಾಂಬ್, ರಾಕೇಟ್ ಮತ್ತು ಶೆಲ್ ದಾಳಿ ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ವಿರುದ್ಧ ದಾಳಿ ಮುಂದುವರಿಸಿದೆ.

ಸ್ವತಃ ಉಕ್ರೇನ್ ಅಧ್ಯಕ್ಷ ಮಿಲಿಟರಿ ಸಮವಸ್ತ್ರ ಧರಿಸಿ ಸೈನಿಕರಿಗೆ ಯುದ್ದ ನಡೆಸುವಂತೆ ಹುಮ್ಮಸ್ಸು ನೀಡುತ್ತಿದ್ದಾರೆ. ಈವರೆಗೆ ನಡೆಸಿದ ದಾಳಿಯಲ್ಲಿ ರಷ್ಯಾದ 1 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ.

ರಷ್ಯಾ ಯುದ್ದ ಮುಂದುರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಅಮೆರಿಕ ಸೇರಿದಂತೆ ಹಲವು ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಿದ್ದು ಭಾರತ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳ ಮತ ಚಲಾಯಿಸದೇ ಹಿಂದೆ ಸರಿದಿವೆ.

ಶುಕ್ರವಾರ ನಡೆದ ನಿರ್ಣಯದಲ್ಲಿ ಪರವಾಗಿ 11 ಮತಗಳು ಬಿದ್ದಿವೆ. ವಿಶ್ವಸಂಸ್ಥೆಯ 193 ಸದಸ್ಯರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಖಾಯಂ ಸದಸ್ಯ ದೇಶಗಳಿಂದ ವಿಟೋ ಅಧಿಕಾರ ಚಲಾಯಿಸಿಲ್ಲ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ದ ಸಾರಿರುವುದರಿಂದ ವಿಶ್ವದಾದ್ಯಂತ ವಿದೇಶಗಳ ನಾಗರಿಕರು ಯುದ್ದ ನಿಲ್ಲಿಸುವಂತೆ ಬೀದಿಗೆ ಇಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರಷ್ಯಾದಲ್ಲೇ ಜನರು ಯುದ್ದ ವಿರೋಧಿ ನಿಲುವುಗಳನ್ನು ತಳೆದು ಪ್ರತಿಭಟನೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular