Friday, October 18, 2024
Google search engine
Homeಮುಖಪುಟನಟ ಕಲಾತಪಸ್ವಿ ರಾಜೇಶ್ ನಿಧನ - ಮುಖ್ಯಮಂತ್ರಿ ಸೇರಿ ಹಲವು ಗಣ್ಯರ ಸಂತಾಪ

ನಟ ಕಲಾತಪಸ್ವಿ ರಾಜೇಶ್ ನಿಧನ – ಮುಖ್ಯಮಂತ್ರಿ ಸೇರಿ ಹಲವು ಗಣ್ಯರ ಸಂತಾಪ

ಬೆಂಗಳೂರಿನಲ್ಲಿ ಕನ್ನಡದ ಕುರುಬ ಗೌಡ ಕುಟುಂಬದಲ್ಲಿ ವಿದ್ಯಾಸಾಗರ್ ಜನಿಸಿದರು. ತ್ಯಾಗರಾಜ ಭಾಗವತರ್, ರಾಜಕುಮಾರಿ ಮತ್ತು ಟಿ.ಆರ್. ಮಹಾಲಿಂಗಂ ಅವರಂತಹ ಅಂದಿನ ತಾರೆಗಳನ್ನು ನೋಡುತ್ತಾ ಬೆಳೆದರು.

ಹಿರಿಯ ನಟ, ಕಲಾತಪಸ್ವಿ ಎಂದೇ ಖ್ಯಾತರಾಗಿದ್ದ ರಾಜೇಶ್ ಇಂದು ನಿಧನರಾಗಿದ್ದಾರೆ. ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು.

ರಾಜೇಶ್ ಅವರ ಮೂಲ ಹೆಸರು ವಿದ್ಯಾಸಾಗರ್ 1935ರಲ್ಲಿ ಜನಿಸಿದ ಅವರು ಸಾಹಿತ್ಯವನ್ನು ಆಳವಾಗಿ ತಿಳಿದುಕೊಂಡಿದ್ದರು. 1960 ಕೊನೆಯಲ್ಲಿ ಮತ್ತು 1970ರ ದಶಕದ ಆರಂಭದಲ್ಲಿ ನಾಯಕ ನಟರಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

ಚಲನಚಿತ್ರ ನಟಿ ಆಶಾ ರಾಣಿ ಅವರ ತಂದೆಯಾಗಿದ್ದು ಶಿವರಾಜ್ ಕುಮಾರ್ ಅವರೊಂದಿಗೆ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದರು ಜನ ಮನ್ನಣೆ ಗಳಿಸಿದ್ದರು.

ಸುಮಾರು 150 ಚಿತ್ರಗಳಲ್ಲಿ ನಟಿಸಿದ್ದರು, ಕಲಾತಪಸ್ವಿ ರಾಜೇಶ್ ಆತ್ಮಕಥೆ ರಾಜೇಶ್ ಜೀವನ ಚರಿತ್ರೆ ಪ್ರಕಟವಾಗಿದೆ. 2014 ರಲ್ಲಿ ರಾಜೇಶ್ ಉತ್ತಮ ಅಭಿನಯಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

ಬೆಂಗಳೂರಿನಲ್ಲಿ ಕನ್ನಡದ ಕುರುಬ ಗೌಡ ಕುಟುಂಬದಲ್ಲಿ ವಿದ್ಯಾಸಾಗರ್ ಜನಿಸಿದರು. ತ್ಯಾಗರಾಜ ಭಾಗವತರ್, ರಾಜಕುಮಾರಿ ಮತ್ತು ಟಿ.ಆರ್. ಮಹಾಲಿಂಗಂ ಅವರಂತಹ ಅಂದಿನ ತಾರೆಗಳನ್ನು ನೋಡುತ್ತಾ ಬೆಳೆದರು.

ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡು ತಂದೆ-ತಾಯಿಯರಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಳಿ ಸೇರಿದರು. ಟ್ಯೂಷನ್ ಹೆಸರಿನಲ್ಲಿ ಅಭ್ಯಾಸಕ್ಕೆ ಹೋಗುತ್ತಿದ್ದ ಅವರಿಗೆ ಮೊದಲ ಪಾತ್ರ ಸಿಕ್ಕಿದ್ದು ಶ್ರೀರಾಮ.

ಹಿರಿಯ ನಟ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಕನ್ನಡದ ಹಿರಿಯ ನಟ ರಾಜೇಶ್ ಸಾವು ಅನಿರೀಕ್ಷಿತ ಅಷ್ಟೇ ಆಘಾತಕಾರಿ. ದೀರ್ಘಕಾಲದಿಂದ ನನ್ನ ಸ್ನೇಹಿತರಾಗಿದ್ದ ರಾಜೇಶ್ ಹುಟ್ಟು ಪ್ರತಿಭೆ ಮತ್ತು ಸ್ವಂತ ಪರಿಶ್ರಮದಿಂದ ಬೆಳೆದು ನಮ್ಮನ್ನೆಲ್ಲ ರಂಜಿಸಿದವರು. ಅವರ ಕುಟುಂಬದ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular